ಭಟ್ಕಳದಲ್ಲಿ ಕೋಮುಸಂಘರ್ಷ ತಡೆಯಲು ರಾಜ್ಯ ಗುಪ್ತದಳ ವಿಫಲವಾಗಿದೆ – ಬಿಜೆಪಿ ಶಾಸಕ ಸುನಿಲ್ ನಾಯ್ಕ್

ಕಾರವಾರ: ಕೋಮು ಸಂಘರ್ಷ ತಡೆಯಲು ಭಟ್ಕಳದಲ್ಲಿ ರಾಜ್ಯ ಗುಪ್ತದಳ ವಿಫಲವಾಗಿದೆ ಎಂದು ಭಟ್ಕಳದ ಬಿಜೆಪಿ ಶಾಸಕ ಸುನಿಲ್ ನಾಯ್ಕ ಕಾರವಾರದಲ್ಲಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸುನಿಲ್ ನಾಯ್ಕ್ ಕೇಂದ್ರ ಅಥವಾ ರಾಜ್ಯದ ಗುಪ್ತಚರ ಇಲಾಖೆಯ ಉಪ ಕಚೇರಿಯನ್ನು ಭಟ್ಕಳದಲ್ಲಿ ತೆರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಭಟ್ಕಳದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐಗೆ ಹೊರ ದೇಶದಿಂದ ಪೈನಾನ್ಸ್ ಆಗುತ್ತಿದೆ. ಅಲ್ಲದೇ ಮೂರ್ನಾಲ್ಕು ವರ್ಷದಲ್ಲಿ ಹಲವು ಸಂಘಟನೆಗಳು ನೆಲೆಯೂರುತ್ತಿವೆ. ಮುಸ್ಲೀಮರು ತಮ್ಮ ಬಲ ಇದೆ ಎನ್ನುವ ಕಾರಣಕ್ಕೆ ಇತ್ತೀಚೆಗಷ್ಟೇ ಪುರಸಭೆ ಕಚೇರಿಗೆ ಉರ್ದು ನಾಮಫಲಕ ಹಾಕುವ ದುಸ್ಸಾಹಸ ಮಾಡಿದ್ರು. ಇಂತಹ ಚಟುವಟಿಕೆಗಳಿಗೆ ನಾವು ಕಡಿವಾಣ ಹಾಕಬೇಕಾಗಿದೆ ಎಂದರು.

ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಕೇಂದ್ರದಿಂದ ಎನ್‌ಐಎ ಸಂಸ್ಥೆಯ ಶಾಖೆಯನ್ನು ಭಟ್ಕಳದಲ್ಲಿ ತೆರಯಬೇಕು ಎಂದು ಈಗಾಗಲೇ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.