ಮಾರಿಕಾಂಬಾ ದೇವಾಲಯದಲ್ಲಿ ಜರುಗಿದ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ

ಶಿರಸಿ: ಶಕ್ತಿ ದೇವತೆ ಮಾರಿಕಾಂಬಾ ದೇವಾಲಯದ ಆವರಣ ಇದೀಗ ಸಾಂಸ್ಕೃತಿಕ ಕಲೆಗಳ ತಾಣವಾಗಿ ಬದಲಾಗಿದೆ. ಶ್ರಾವಣ ಮಾಸದ ಅಂಗವಾಗಿ ಪ್ರತಿ ದಿನವೂ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆಯುತ್ತಿವೆ.

ಭಾನುವಾರ ಸಂಜೆ ಶ್ರೀಗೌರೀ ಮಹಿಳಾ ಸಮಾಜದಿಂದ ಲಲಿತ ಸಹಸ್ರನಾಮ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ಗೌರಿ ಮಹಿಳಾ ಸಮಾಜದ ಸದಸ್ಯರು ಲಲಿತ ಸಹಸ್ರನಾಮ ಮತ್ತು ಭಜನೆಗಳನ್ನು ಪ್ರಸ್ತುತಪಡಿಸಿದರು. ಬಳಿಕ ದೈವಜ್ಞ ಮಹಿಳಾ ಮಂಡಳಿಯಿಂದ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಸದ್ಭಾವನಾ ಸಂಸ್ಥೆಯಿಂದ ಸುದನ್ವಾರ್ಜುನ ಎಂಬ ಯಕ್ಷಗಾನ ಪ್ರಸಂಗ ನಡೆಯಿತು.

ಇನ್ನೂ ಶ್ರಾವಣ ಮಾಸದ ಅಂಗವಾಗಿ ತಾಯಿ ಮಾರಿಕಾಂಬೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ದೇವಿಯ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಕೂಡಾ ಹೆಚ್ಚುತ್ತಿದೆ. ದೇವಾಲಯದ ಅಧ್ಯಕ್ಷ ಆರ್ ಜಿ ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಧರ್ಮದರ್ಶಿಗಳು, ಬಾಬುದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.