ಚುನಾವಣೆ: ಐದು ದಿನ ಮದ್ಯ ಮಾರಾಟವಿಲ್ಲ

ಕಾರವಾರ: ವಿಧಾನ ಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ತ ಉತ್ತರಕನ್ನಡ ಜಿಲ್ಲೆಯಲ್ಲಿ ಸರಿಸುಮಾರು ಐದು ದಿನಗಳ ಕಾಲ ಮದ್ಯ ಮಾರಾಟವಿರುವುದಿಲ್ಲ . ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೂರಡಿಸಿದ್ದಾರೆ.
ಚುನಾವಣೆ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮತದಾನ ಮುಕ್ತಾಯವಾಗುವ ೪೮ ಗಂಟೆಗಳ ಮೊದಲಿನ ಅವಧಿಗೆ ಅಂದರೆ ಮೇ೮ ರಂದು ಸಂಜೆ ೦೫ಗಂಟೆಯಿAದ ಮೇ ೧೧ ರ ಬೆಳಿಗ್ಗೆ ೧೧ ಗಂಟೆಯವೆರೆಗೆ ಹಾಗೂ ಮತ ಎಣಿಕೆ ದಿನವಾದ ಮೇ೧೩ ರ ಬೆಳಿಗ್ಗೆ ೬ ಗಂಟೆಯಿAದ ೧೪ ರ ಬೆಳಿಗ್ಗೆ ೬ಗಂಟೆಯವರೆಗೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ವೈನ್ ಶಾಪ್ ಮತ್ತು ಬಾರಗಳನ್ನು ಮುಚ್ಚಲು ಆದೇಶ ಮಾಡಿದ್ದಾರೆ . ಹಾಗೂ ಮತದಾನದ ದಿನವಾದ ಮೇ೧೦ ಮತ್ತು ಮತ ಎಣಿಕೆ ದಿನವಾದ ಮೇ13 ರಂದು ಈ ಎರಡು ದಿನಗಳನ್ನು ಒಣ ದಿನಗಳೆಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಎಲ್ಲ ರೀತಿಯ ಮದ್ಯ ಮಾರಟ ಸಾಗಾಟವನ್ನು ಹಾಗೂ ಅನಧಿಕೃತವಾಗಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಶೇಖರಣೆ ಮಾಡುವುದನ್ನು ನಿಷೇದಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.