ಕಾರವಾರ: ತಾಲೂಕಿನ ಅಮದಳ್ಳಿಯ ಉಧ್ಬವ ಮೂರ್ತಿ ಶ್ರೀ ವೀರಗಣಪತಿ ದೇವರ ೩೯ ನೇ ವಾರ್ಷಿಕೋತ್ಸವ ಶನಿವಾರ ವಿಜೃಂಭಣೆಯಿAದ ನಡೆಯಲಿದೆ. ಅಂದು ಬೆಳಿಗ್ಗೆ ಮಹಾಮಂಗಳಾರತಿ ,ಸಾಮೂಹಿಕ ಹಾಗೂ ದೇವಸ್ಥಾನದ ವತಿಯಿಂದ ೧೦೮ ತೆಂಗಿನಕಾಯಿ ಗಣಹೋಮ ಮತ್ತು ಪೂರ್ಣಾಹುತಿ,ಮಧ್ಯಾಹ್ನ ೧೨ ಗಂಟೆಯಿAದ ೧ ಗಂಟೆಯವರೆಗೆ ಅಭಿಷೇಕ ಮಹಾಪೂಜೆ ಮತ್ತು ಪ್ರಸಾದ ವಿತರಣೆ, ೨ ರಿಂದ ೬ ಗಂಟೆವರೆಗೆ ಇಚ್ಛಿತ್ ಗುರುದಾಸ್ ತಳಾವಳೀಕರ್ ಮಡಗಾಂವ್ ಗೋವಾ ಇವರಿಂದ ೧೭ ನೇ ವರ್ಷದ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ೭:೩೦ ರಿಂದ ೮:೩೦ ರವರೆಗೆ ರಂಗಪೂಜೆ ಹಾಗೂ ದೀಪೋತ್ಸವ ಜರುಗಲಿದೆ. ಅದೇ ದಿನ ರಾತ್ರಿ ೮:೩೦ಕ್ಕೆ ಶ್ರೀ ಚೌಡೇಶ್ವರಿನಾಗದೇವತಾ ಯಕ್ಷಣಿ ಗೆಳೆಯರ ಬಳಗ ಅಮದಳ್ಳಿ ಇವರಿಂದ ೩೯ನೇ ಪ್ರಯೋಗ ಶ್ರೀ ಜಿ.ಡಿ.ಗೋವಿಂದ ಕುಮಾರ ವಿರಚಿತ ೨೨ನೇ ಕಲಾಕೃತಿ “ಅಣ್ಣ ಬೇಡಿದ ಶಿಕ್ಷೆ ತಂಗಗಿ ನೀಡಿದ ಶಿಕ್ಷೆ ” ಎಂಬ ಸುಂದರ ಕೌಟುಂಬಿಕ ಹಾಸ್ಯಮಯ ನಾಟಕವನ್ನು ಅಭಿನಯಿಸಲಿರುವರು .ಭಕ್ತ ಕಲಾ ಪ್ರೇಮಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಸಂಘಟಕರು ಕೋರಿದ್ದಾರೆ.