ಹೊನ್ನಾವರ, ಕುಮಟಾದಲ್ಲಿದ್ದು ಜನರ ಸಮಸ್ಯೆ ಆಲಿಸುವೆ: ನಿವೇದಿತ್ ಆಳ್ವಾ

ಹೊನ್ನಾವರ: ಕ್ಷೇತ್ರ ಎರಡು ತಾಲೂಕನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ ಯಾವುದೇ ಪಕ್ಷದವರು ಆಯ್ಕೆಯಾದರೂ ಒಂದು ತಾಲೂಕಿಗೆ ಬೆಣ್ಣೆ ಇನ್ನೊಂದು ತಾಲೂಕಿಗೆ ಸುಣ್ಣದಂತಹ ವರ್ತನೆ ತೋರುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ನಡುವೆ ಕಾಂಗ್ರೇಸ್ ಪಕ್ಷ ತನ್ನ ಅಭ್ಯರ್ಥಿ ನಿವೇದಿತ್ ಆಳ್ವಾ ಘೋಷಣೆಯ ಬಳಿಕ ಹೊರಗಿನವರು ಎಂದು ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಆರೋಪಿಸುತ್ತಾ ಬಂದಿದ್ದರು. ಇದಕ್ಕೆಲ್ಲ ಕೌಂಟರ್ ನೀಡಿರುವ ನಿವೇದಿತ್ ಆಳ್ವಾ, ಶಾಸಕನಾಗಿ ಆಯ್ಕೆಯಾದ ತಕ್ಷಣ
ಹೊನ್ನಾವರದಲ್ಲಿಯೂ ಮನೆ ತೆರೆದು ವಾರದಲ್ಲಿ ಮೂರು ದಿನ ಇರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಕುಮಟಾದಲ್ಲಿ ಈಗಾಗಲೇ ಮನೆ ಇದ್ದು, ಹೊನ್ನಾವರದಲ್ಲಿಯೂ ಮನೆ ತೆರೆದು ವಾರದಲ್ಲಿ ಮೂರು ದಿನ ಲಭ್ಯ ಇರುತ್ತೇನೆ. ಶಾಸಕನಾದ ಬಳಿಕ ಕುಮಟಾ ಹಾಗೂ ಹೊನ್ನಾವರವನ್ನು ಸಮನಾಗಿ ಪರಿಗಣಿಸಿ ಅಭಿವೃದ್ಧಿ ಮಾಡುತ್ತೇನೆ ಎನ್ನುವ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿಗೆ ಅವಕಾಶವಿದ್ದು, ನಿರುದ್ಯೋಗ ಸಮಸ್ಯೆ
ಈ ಮೂಲಕ ಬಗೆಹರಿಯಲಿದೆ. ಕೃಷಿಗೆ ಸೂಕ್ತ ಮಾರುಕಟ್ಟೆ ಇಲ್ಲ. ಮೀನುಗಾರರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಹಾಲಕ್ಕಿ ಸಮಾಜದವರ ಬಹು ವರ್ಷದ ಮೀಸಲಾತಿ ಬೇಡಿಕೆ ಈಡೇರಿಲ್ಲ. ಕ್ಷೇತ್ರದಲ್ಲಿ ಸರಿಯಾದ ಆಸ್ಪತ್ರೆ ಇಲ್ಲ. ನುರಿತ ಶಿಕ್ಷಣ ಪರಿಕರದ ಕೊರತೆಯ ನಡುವೆ ಕ್ಷೇತ್ರದಲ್ಲಿ ಶಿಕ್ಷಣ ವ್ಯವಸ್ಥೆ ಇದೆ. ಇಂತಹ ಹಲವು ಯೋಚನೆಗಳಿಗೆ ಪರಿಹಾರ ಕಲ್ಪಿಸಲು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದು, ಕಾರ್ಯಕರ್ತರು ಹಾಗೂ
ಕ್ಷೇತ್ರದ ಜನತೆಯ ಸಹಕಾರದ ಮೇರೆಗೆ ಆಯ್ಕೆಯಾಗುವ ಭರವಸೆ ಇಮ್ಮಡಿಗೊಳಿಸಿದೆ ಎಂದರು.
ಹಿಂದಿನ ಅವಧಿಯ ಶಾಸಕರು, ಅಭಿವೃದ್ದಿ ಮಾಡಿಲ್ಲ. ಹೊನ್ನಾವರದಲ್ಲಿ ಶಾಸಕರ ಕಛೇರಿಯನ್ನು ತೆರೆದಿಲ್ಲ. ಆಯ್ಕೆ ಮಾಡಿದ ತಪ್ಪಿಗೆ ಹೊನ್ನಾವರದಿಂದ ಕುಮಟಾಕ್ಕೆ ಬರಬೇಕು. ಕುಮಟಾದವರಿಗೂ ಸರಿಯಾ ಶಾಸಕರು ಸಿಗಲಿಲ್ಲ ಎನ್ನುವ ಆರೋಪ ಕ್ಷೇತ್ರದ ಜನತೆಯನ್ನು ಬೇಟಿಯಾದಾಗ ಗಮನಕ್ಕೆ ತಂದಿದ್ದಾರೆ. ಆಯ್ಕೆಯಾದರೆ ಹೊನ್ನಾವರ ಹಾಗೂ ಕುಮಟಾದಲ್ಲಿಯೂ ಜನತೆಯ ಸಮಸ್ಯೆ ಆಲಿಸುತ್ತೇನೆ. ಪ್ರತಿ ತಿಂಗಳಿಗೊಮ್ಮೆ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತೇನೆ ಎಂದು ಭರವಸೆ ನೀಡಿದರು.