ಕುಮಟಾ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಕ್ಷೇತ್ರ ಸಾಕಷ್ಟು ಗಮನ ಸೆಳೆದಿದೆ. ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅ¨À್ಯರ್ಥಿಯಾಗಿರುವ ನಿವೇದಿತ್ ಆಳ್ವಾರತ್ತ ಇದೀಗ ಪಕ್ಷದ ನಾಯಕರು ಚಿತ್ತ ಹರಿಸಿದ್ದು ನಾಮಧಾರಿ ಮತ ಸೆಳೆಯಲು ಬಿ.ಕೆ ಹರಿಪ್ರಸಾದ್ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದಾರೆ. ಜಿಲ್ಲೆಯಲ್ಲಿಯೇ ಕುಮಟಾ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು. ಕ್ಷೇತ್ರದ ಕಾಂಗ್ರೆಸ್ ಟಿಕೇಟ್‌ಗಾಗಿ ಹದಿನೈದು ಜನ ಅರ್ಜಿ ಸಲ್ಲಿಸಿ ಸಾಕಷ್ಟು ಪೈಪೋಟಿ ನಡೆಸಿದ್ದು ಯಾರಿಗೆ ಟಿಕೇಟ್ ಸಿಗಲಿದೆ ಎನ್ನುವುದೇ ಸಾಕಷು ್ಟ
ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾರಿಗೆ ಅವಕಾಶ ಮಾಡಿಕೊಟ್ಟಿದ್ದು ಸದ್ಯ ಜೋರಾಗಿ ಚುನಾವಣಾ ಪ್ರಚಾರವನ್ನ ಸಹ ನಡೆಸಲಾಗುತ್ತಿದೆ. ಪಕ್ಷದಿಂದ ಬಂಡಾಯ ಅ¨À್ಯರ್ಥಿಯಾಗಿ ಸ್ಪರ್ಧಿಸಿದ್ದ ಶಾರದಾ ಶೆಟ್ಟಿ ಸಹ ವಾಪಾಸ್ ಪಡೆದಿದ್ದು ಶಾರದಾ ಶೆಟ್ಟಿ ಬೆಂಬಲಿಗರು ನಿವೇದಿತ್ ಆಳ್ವಾ ಟೀಂ ನಲ್ಲಿ ಸೇರಿಕೊಂಡ ಪ್ರಚಾರಕ್ಕೆ ಇಳಿದಿದ್ದು ಶಿವಾನಂದ ಹೆಗಡೆ ಕಡತೋಕ ಹೊರತು ಪಡಿಸಿ ಉಳಿದೆಲ್ಲಾ ನಾಯಕರುಗಳು ಒಂದಾಗಿ ಅಭ್ಯರ್ಥಿ ಪರ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ. ಇನ್ನು ಈ ಬಾರಿ ನಿವೇದಿತ್ ಆಳ್ವಾ ಅವರನ್ನ ಗೆಲ್ಲಿಸಲೇ ಬೇಕು ಎಂದು ಕಾಂಗ್ರೆಸ್ ನಾಯಕರು ಪ್ರಯತ್ನಕ್ಕೆ ಇಳಿದಿದ್ದು ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಪ್ರತಿದಿನ ಮಾಹಿತಿಯನ್ನ ಕೆಪಿಸಿಸಿ ನಾಯಕರು ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಸದಸ್ಯ ಜಿ ಚಂದ್ರಶೇಖರ್ ಹಾಗೂ ಮಾಜಿ ನಿಗಮ ಮಂಡಳಿ ಅಧ್ಯಕ್ಷ ಹುಸೇನ್ ಎನ್ನುವವರು ಕೆಪಿಸಿಸಿ ಪರವಾಗಿ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದ್ದಾರೆ. ನಿವೇದಿತ್ ಆಳ್ವಾ ಪರ ಪ್ರಚಾರಕ್ಕೆ ಪ್ರಿಯಾಂಕ ಗಾಂಧಿ, ಡಿ.ಕೆ
ಶಿವಕುಮಾರ್ ಸೇರಿ ಹಲವು ನಾಯಕರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ ನಿವೇದಿತ್ ಆಳ್ವಾರನ್ನ ಗೆಲ್ಲಿಸಲೇ ಬೇಕ ಎಂದು ಪ್ರಯತ್ನ ನಡೆಸಿದ್ದು ಕ್ಷೇತ್ರದ ಸ್ಥಳೀಯ ನಾಯಕರನ್ನ ಸಹ ಸಂಪರ್ಕಿಸಿ ಕೆಲಸ ಮಾಡುವಂತೆ ನಾಯಕರುಗಳು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇನ್ನು ಕ್ಷೇತ್ರದ ನಾಮದಾರಿ ಸಮುದಾಯದ ಮತ ಈ ಬಾರಿ ಹೆಚ್ಚಾಗಿ ಜೆಡಿಎಸ್ ಪರ ಹೋಗಲಿದೆ ಎನ್ನಲಾಗಿದೆ. ಇದನ್ನ ತಡೆಯಲು ಬಿ.ಕೆ ಹರಿಪ್ರಸಾದ್ ಅವರಿಗೆ ಟಾಸ್ಕ ನೀಡಿದ್ದು ಕ್ಷೇತ್ರಕ್ಕೆ ಎಂಟ್ರಿಯಾಗಿರುವ ಬಿ.ಕೆ ಹರಿಪ್ರಸಾದ್ ತಮ್ಮ ಆಪ್ತ ವಲಯಕ್ಕೆ ನಾಮಧಾರಿ ಮತ ಕಾಂಗ್ರೆಸ್ ಪಕ್ಷದತ್ತ ಸೆಳೆಯುವಂತೆ ಸೂಚನೆ ನೀಡಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.