ದಿನಕರ ಶೆಟ್ಟಿ ಚುನಾವಣಾ ಪ್ರಚಾರ

ಕುಮಟಾ: ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಹೊನ್ನಾವರ ತಾಲೂಕಿನ ಹೊದಕೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಕೈಗೊಂಡರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ಚಂದಾವರ ಗ್ರಾ. ಪಂ. ಕ್ಷೇತ್ರ ವಿಶಾಲವಾದ ವ್ಯಾಪ್ತಿಯನ್ನು ಹೊಂದಿದ್ದು, ಗ್ರಾಮಗಳ ನಡುವಿನ ಅಂತರ ಜಾಸ್ತಿ ಇದೆ. ಆದರೆ ೫ ಗ್ರಾಮಗಳಿಗೆ ಸುಸಜ್ಜಿತವಾದ ರಸ್ತೆಗಳು ನಮ್ಮ ಅವಧಿಯಲ್ಲಿ ನಿರ್ಮಾಣವಾಗಿದೆ, ಕುಮಟಾ ಸಿದ್ದಾಪರ ಹೆದ್ದಾರಿ ದುರಸ್ತಿಗೆ ರಾಜ್ಯ ಸರ್ಕಾರ ೧೯ಕೋಟಿ ರೂಪಾಯಿಗಳನ್ನು ಒದಗಿಸಿದ್ದು ಸಂತೆಗುಳಿವರೆಗೆ ಅತ್ಯುತ್ತಮ ರಸ್ತೆ ನಿರ್ಮಾಣವಾಗಿದೆ. ಚಂದಾವರ-ಅರೆಅAಗಡಿ ನಡುವೆ ರಸ್ತೆ ಸುಧಾರಣೆ ಕಾಮಗಾರಿ ಚಾಲ್ತಿಯಲ್ಲಿದೆ, ಉಪರಸ್ತೆಗಳಿಗೂ ಅತಿಹೆಚ್ಚು ಅನುದಾನವನ್ನು ಬಿಜೆಪಿ ಸರ್ಕಾರ ನಿಮ್ಮ ಭಾಗಕ್ಕೆ ನೀಡಿದೆ. ಕೊರೊನಾ ಸಂಕಷ್ಟದಲ್ಲಿ ಪ್ರವಾಹದ ಸಂದರ್ಭದಲ್ಲಿ ಅಥವಾ ಇತರ ಯಾವುದೇ ಸಂದರ್ಭದಲ್ಲಿ ನಮ್ಮ ಕ್ಷೇತ್ರದ ಜನರಿಗೆ ನೆರವಾಗದ ಕೆಲವು ವ್ಯಕ್ತಿಗಳು ಇಂದು ಚುನಾವಣೆಯ ಸಂದರ್ಭದಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಅಂತವರ ಕುತಂತ್ರಗಳಿಗೆ ಮತದಾರರು ಮೇ ೧೦ ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನದ ಮೂಲಕ ತಕ್ಕ ಪಾಠ ಕಲಿಸಬೇಕಿದೆ. ಬಿಜೆಪಿಯು ಮತ್ತೊಮ್ಮೆ ಅಧಿಕಾರಕ್ಕೆ ಬರಲು ನಿಮ್ಮೆಲ್ಲರ ಆಶೀರ್ವಾದ ಅತ್ಯಗತ್ಯ ಎಂದು ಹೇಳಿದರು. ಹೊನ್ನಾವರ ಮಂಡಲಾಧ್ಯಕ್ಷ ರಾಜು ಭಂಡಾರಿ, ವಿಧಾನಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಎಮ್.ಜಿ. ಭಟ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಹೆಗಡೆ ಕಡ್ಲೆ, ಶಕ್ತಿಕೇಂದ್ರದ ಪ್ರಮುಖ ಎಮ್. ಎಸ್. ನಾಯ್ಕ, ಚಂದಾವರ ಗ್ರಾಮಪಂಚಾಯತ್ ಅಧ್ಯಕ್ಷೆ ಛಾಯಾ ಉಭಯಕರ್, ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಗೋವಿಂದ ಗೌಡ, ಚಂದಾವರ ಗ್ರಾಮಪಂಚಾಯತ್ ಸದಸ್ಯರಾದ ಪ್ರೇಮಾ ಮೋಹನ ನಾಯ್ಕ, ಮಂಜುನಾಥ ಮಡಿವಾಳ, ಮಲ್ಲಿಕಾ ಭಂಡಾರಿ, ಹಾಗೂ ಅಶ್ವಿನಿ ನಾಯ್ಕ, ಬೂತ್ ಕಮಿಟಿ ಅಧ್ಯಕ್ಷ ಮೋಹನ ಎಮ್. ನಾಯ್ಕ, ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ. ವಿ. ನಾಯ್ಕ, ಊರಿನ ಪ್ರಮುಖರಾದ ಗುರು ಐಗಳ, ದತ್ತು ಪಟಗಾರ, ಮೋಹನ ವಿ. ನಾಯ್ಕ, ಶ್ರೀಕಾಂತ ಭಂಡಾರಿ, ಬೂತ್ ಕಮಿಟಿ ಸದಸ್ಯರು, ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.