ಭಟ್ಕಳದಲ್ಲಿ ಜೆ.ಡಿ.ಎಸ್ ಕಾಂಗ್ರೇಸ್ ಪ್ರತಿಸ್ಪರ್ಧಿ ಹೊರತು ಬಿಜೆಪಿಯಲ್ಲ : ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ

ಭಟ್ಕಳ : ಈ ಬಾರಿಯ ವಿಧಾನಸಭಾ  ಚುನಾವಣೆಯಲ್ಲಿ. ನಮಗೆ ಭಟ್ಕಳದಲ್ಲಿ ಕಾಂಗ್ರೇಸ್ ಪ್ರತಿಸ್ಪರ್ಧಿಯೇ ಹೊರತು ಬಿಜೆಪಿಯಲ್ಲ ಈ ಬಾರಿ ಬಿಜೆಪಿ ಭಟ್ಕಳದಲ್ಲಿ ಮೂರನೇ ಸ್ಥಾನಕ್ಕೆ ಬರಲಿದೆ ಎಂದು ಜೆ.ಡಿ.ಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ ಹೇಳಿದರು. 

ಅವರು  ಕಾರ್ಯಕರ್ತರ ಸಮಾವೇಶದ ನಂತರ ಪತ್ರಿಕಾಗೋಷ್ಟಿಯನ್ನುದ್ದೇಶಿ ಮಾತನಾಡಿದರು. ಚುನಾವಣಾ ಪೂರ್ವ ಸಮೀಕ್ಷೆಗಳು ಉ.ಕ ಜಿಲ್ಲೆಯಲ್ಲಿ ಜೆ.ಡಿ.ಎಸ್ ಗೆ ಯಾವುದೇ ಸ್ಥಾನ ನೀಡಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸರ್ವೇಗಳು ನಾನು ಬರುವ ಪೂರ್ವದಲ್ಲೇ ಮಾಡಿದ್ದು. ಈಗ ನಾನು ಭಟ್ಕಳಕ್ಕೆ ಬಂದ ಮೇಲೆ ಸಂಪೂರ್ಣ ಚಿತ್ರಣ ಬದಲಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪರೇಶ ಮೇಸ್ತನ ಸಾವಿನ ಹಿನ್ನೆಯಲ್ಲಿ ಬಿಜೆಪಿ ಪಕ್ಷ ಚುನಾವಣೆ ಗೆಲ್ಲಲು ಸಾಧ್ಯವಾಗಿದೆ. ಆದರೆ ಈ ಬಾರಿ ಚಿತ್ರಣ ಬದಲಾಗಿ .ನಮಗೆ ಈ ಬಾರಿ ಕಾಂಗ್ರೇಸ್ ಪ್ರತಿಸ್ಪರ್ಧಿ ಹೊರತು ಬಿಜೆಪಿಯಲ್ಲ.  ಈ ಬಾರಿ ಬಿಜೆಪಿ ಮೂರನೇ ಸ್ಥಾನದಲ್ಲಿರಲಿದೆ ಎಂದರು