ಕಾರವಾರ :– ಆಟೋದಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರ ತಪಾಸಣಾ ಕೆಂದ್ರದಲ್ಲಿ ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಿಂದ ಕುಮಟಾಕ್ಕೆ ಕೆ.ಎ ೧೪,ಸಿ೪೮೭೪ ನೊಂದಣಿಯ ಆಟೋದಲ್ಲಿ ಮಧ್ಯರಾತ್ರಿ ವೇಳೆ ಪ್ರಯಾಣಿಕರೊಬ್ಬರು ೯೩.೫ ಲಕ್ಷ ಹಣವನ್ನು ದಾಖಲೆ ಇಲ್ಲದೇ ತರುತ್ತಿದ್ದ ವೇಳೆ ಅಟೋ ದೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೂಲದ ಭರತ್ ಹಾಗೂ ಆಟೊ ಚಾಲಕ ಕುಮಟಾ ಕಾಗಲ್ ನ ರವಿ ಪಂಡಿತ್ ಹಣ ಸಾಗಾಟದಲ್ಲಿ ತೊಡಗಿದ್ದ ಆರೋಪಿಗಳಾಗಿದ್ದಾರೆ.
ಆದರೆ ಈವರೆಗೂ ಪ್ರಕರಣ ದಾಖಲಾಗಿಲ್ಲ. ಇನ್ನು ಆರೋಪಿಗಳು ಶಿವಮೊಗ್ಗ ಮೂಲದವರಾಗಿದ್ದು ಪಕ್ಷ ಒಂದರ ಕಾರ್ಯಕರ್ತರು ಎಂದು ಹೆಳಲಾಗುತ್ತಿದೆ. ಶಿವಮೊಗ್ಗದಿಂದ ಕುಮಟಾಕ್ಕೆ ಯಾರಿಗಾಗಿ ಹಣ ತರಲಾಗುತಿತ್ತು ಎಂಬ ಬಗ್ಗೆ ಮಾಹಿತಿ ಹೊರಬರಬೇಕಿದೆ. ಆದರೆ ಚಂದಾವರ ಚೆಕ್ ಪೋಸ್ಟ್ ಕುಮಟಾಕ್ಕೆ ಬರುತ್ತೆಯಾ ಅಥವಾ ಹೊನ್ನಾವರಕ್ಕೆ ಬರುತ್ತದೆಯಾ ಎಂಬ ಗೊಂದಲದಲ್ಲಿ ಪೋಲಿಸರು ಹಾಗೂ ಚುನಾವಣಾಧಿಕಾರಿಗಳಿದ್ದು ,ಕುಮಟಾದ ತಹಶೀಲ್ದಾರ್ ಕಚೇರಿಯಲ್ಲಿ ಜಪ್ತು ಪಡೆದ ಹಣ, ಆಟೋ ಇಡಲಾಗಿದೆ. ಪ್ರಕರಣದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.