ಭಟ್ಕಳ:
ಮಾರ್ಚ್ 5ರಿಂದ 8ರ ತನಕ ಖೇಲೋ ಇಂಡಿಯಾ ಅಸ್ಮಿತಾ ದಕ್ಷಿಣ ವಲಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ಸ್ಪರ್ಧೆಯಲ್ಲಿ ದಕ್ಷಿಣ ರಾಜ್ಯಗಳಾದ ಕೇರಳ, ತಮಿಳುನಾಡು, ಓಡಿಸಾ, ಪಾಂಡಿಚೇರಿ, ಅಂಡಮಾನ್ ನಿಕೋಬಾರ್ ಲಕ್ಷ ದ್ವೀಪ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಉನ್ನತ ಮಹಿಳಾ ಕಿಕ್ ಬಾಕ್ಸರ್‌ಗಳು ಭಾಗವಹಿಸಿ, ತಮ್ಮ ಕೌಶಲ್ಯ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದರು.
ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಖೇಲೋ ಇಂಡಿಯಾ ಅಸ್ಮಿತಾ ಹೆಸರಿನಲ್ಲಿ ಮಹಿಳಾ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ಮಹಿಳಾ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವುದು, ಯುವ ಪ್ರತಿಭೆಗಳು ಮಿಂಚಲು ವೇದಿಕೆಯನ್ನು ಒದಗಿಸುವುದು ಈ ಪಂದ್ಯಾವಳಿಯ ಗುರಿಯಾಗಿದೆ. ಚಿನ್ನದ ಪದಕ ಪಡೆದ ವಿಜೇತರಿಗೆ 8000 ರೂ ಮತ್ತು ಬೆಳ್ಳಿಯ ಪದಕ ಪಡೆದ ವಿಜೇತರಿಗೆ 6000 ರೂ ಹಾಗೂ ಕಂಚಿನ ಪದಕ ಪಡೆದ ವಿಜೇತರಿಗೆ 4000 ರೂ ನಗದು ಬಹುಮಾನ ನೀಡಲಾಯಿತು. ಪದಕ ಪಡೆದ ವಿಜೇತ ಮಹಿಳಾ ಕ್ರೀಡಾಪಟುಗಳು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಲೀಗ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಭಟ್ಕಳ ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಮಹಿಳಾಪಟುಗಳು ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಲಿಖಿತಾ ಶಂಕರ ನಾಯ್ಕ : ಜೂನಿಯರ್ ವಿಭಾಗದ -45 ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ.
ಅಖಿಲಾ ಚಂದ್ರಕಾಂತ ನಾಯಕ : ಸೀನಿಯರ್ ವಿಭಾಗದ -45 ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ.
ಸಮೀಕ್ಷಾ ಮಾಸ್ತಿ ಗೊಂಡ : ಸಬ್ ಜೂನಿಯರ್ ವಿಭಾಗದ -37 ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಕಂಚಿನ ಪದಕ.
ಮನಾಲಿ ರಾಜು ನಾಯ್ಕ : ಜೂನಿಯರ್ ವಿಭಾಗದ -42 ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಕಂಚಿನ ಪದಕ.
ಆಶಿತಾ ಉದಯ ನಾಯ್ಕ : ಸಬ್ ಜೂನಿಯರ್ ವಿಭಾಗದ -42 ಕೆಜಿ ಪಾಯಿಂಟ್ ಫೈಟ್ ನಲ್ಲಿ 5ನೇ ಸ್ಥಾನ. ಅಲ್ಲದೆ ತಂಡವು ಪಾಯಿಂಟ್ ಫೈಟ್ ಟೀಮ್ ವಿಭಾಗದಲ್ಲಿ ದ್ವಿತೀಯ. ನಾಗಶ್ರೀ ನಾಯ್ಕ ಈ ಸ್ಪರ್ಧೆಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರು
ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಉತ್ತರ ಕನ್ನಡ ಜಿಲ್ಲಾ ಕಿಕ್‌ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ತರಬೇತುದಾರ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರ ಮನೋಜ್ ನಾಯ್ಕ, ಉಮೇಶ್ ಮೊಗೇರ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

