ಭಟ್ಕಳ: ಮುಂದಿನ ಆಯವ್ಯಯದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಗೆ 50 ಹೆಚ್ಚುವರಿ ಹಾಸಿಗೆ ಮಾಡಿಕೊಡುವುದಾಗಿ ಆರೋಗ್ಯ ಸಚಿವ ಡಾ.ಸುಧಾಕರ್ ಭರವಸೆ ನೀಡಿದ್ದಾರೆ. ಅವರು ಭಟ್ಕಳ ತಾಲೂಕಾಸ್ಪತ್ರೆಗೆ ಪರಿಶೀಲನೆಗೆ ಭೇಟಿ ವೇಳೆ ಕಾರ್ಯಕ್ರಮ ಉದ್ದೇಶಿ ಮಾತನಾಡಿದರು.
ಅದೇ ರೀತಿ ಕನಿಷ್ಠ 30 ಹಾಸಿಗೆಯುಳ್ಳ ತಾಯಿ ಮಗುವಿನ ಆಸ್ಪತ್ರೆಯನ್ನು ಕೂಡ ಮಾಡಿಕೊಡುವುದಾಗಿ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಶಾಸಕ ಸುನೀಲ ನಾಯ್ಕ, ಗೋವಿಂದ ನಾಯ್ಕ ಹಾಗೂ ಇನ್ನಿತರು ಉಪಸ್ಥಿತರಿದ್ದರು.