ಅಂಕೋಲಾ: ಕಾರವಾರ ಮತ್ತು ಅಂಕೋಲಾ ಎರಡೂ ತಾಲ್ಲೂಕು ನನ್ನೆರಡು ಕಣ್ಣುಗಳಿದ್ದಂತೆ ಬೇಧ ಮಾಡದೆ ಕ್ಷೇತ್ರದ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿದ್ದೆನೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.
ತಾಲ್ಲೂಕಿನ ವಾಸರಕುದ್ರಗಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿ ಅವರು ಮಾತನಾಡಿದರು.
ನನ್ನ ಕ್ಷೇತ್ರದಲ್ಲಿ ರಸ್ತೆ ಸೇತುವೆ, ದೇವಸ್ಥಾನ, ಶಾಲಾ ಕಾಲೇಜು ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿಗಳನ್ನು ಮಾಡಿದ್ದೇನೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಇರುವುದನ್ನು ಮನಗಂಡು 38 ಕೋಟಿ ರೂ ವೆಚ್ಚದಲ್ಲಿ ಶಿರಗುಂಜಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಅಡಿಗಲ್ಲು ಸ್ಥಾಪಿಸಲಾಗಿದೆ. ಇದರಿಂದಾಗಿ ಏಳು ಗ್ರಾಮ ಪಂಚಾಯತಿಗಳಿಗೆ ನೀರಿನ ಸಮಸ್ಯೆ ನೀಗಲಿದೆ ಎಂದರು.
ಪಕ್ಷಪಾತವಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಎಲ್ಲಿ ರಸ್ತೆ ಕುಡಿಯುವ ನೀರಿನ ಸಮಸ್ಯೆ ಇದೆಯೋ, ಎಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕೋ ಅಲ್ಲಿ ಯಾವುದೇ ಜಾತಿ,ಧರ್ಮ,ಪಕ್ಷ ಬೇಧವಿಲ್ಲದೇ ಕೆಲಸ ಮಾಡಿದ್ದೆನೆ. ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಅಭಿವೃದ್ಧಿ ಮಾಡದೇ ದೇಶದ ಮೇಲಿನ ಸಾಲವನ್ನು ಊಹೆಗೂ ನಿಲುಕದಷ್ಟು ಮಾಡಿ ದೇಶವನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡಿತ್ತು ಆದರೆ ಈಗ ಮೋದಿಜಿ ನೇತ್ರತ್ವದ ಬಿಜೆಪಿ ಸರಕಾರ ದೇಶವನ್ನು ಸಮರ್ಥವಾಗಿ ನಡೆಸಿಕೊಂಡು ಹೊರಟಿದೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ನೀಡಬೇಕು ಎಂದು ಮತಯಾಚಿಸಿದರು.
ಮೇ 3 ಮಾನ್ಯ ಪ್ರಧಾನಿಯವರು ಪ್ರಪ್ರಥಮ ಬಾರಿಗೆ ಜಿಲ್ಲೆಗೆ ಅದೂ ನಮ್ಮ ಕ್ಷೇತ್ರಕ್ಕೆ ಆಗಮಿಸುತ್ತಿರುವುದು ಹೆಮ್ಮೆಯ ಅತ್ಯಂತ ಸಂತಸದ ಸಂಗತಿ ತಾವೆಲ್ಲರೂ ಬೆಳಗಿನಿಂದಲೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ಸುಗೊಳಿಸಬೇಕು ಎಂದರು.
ವಿಧಾನಪರಿಷತ್ ಸದಸ್ಯರಾದ ಶ್ರೀ ಗಣಪತಿ ಉಳ್ವೇಕರ ಮಾತನಾಡಿ, ದೇಶಕ್ಕೆ ಮೋದಿಹಾಗೂ ಕ್ಷೇತ್ರಕ್ಕೆ ರೂಪಾಲಿ ನಾಯ್ಕ ನಮ್ಮೆಲ್ಲರ ಆಯ್ಕೆಯಾಗಬೇಕು. ಹಿಂದೆಂದೂಕಾಣದ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಅದನ್ನು ಮುಂದುವರೆಸಲು ರೂಪಾಲಿ ನಾಯ್ಕ ಅವರನ್ನು ಆರಿಸಿ ತರಬೇಕಿದೆ. ಮೇ 10 ರಂದು ನಡೆಯುವ ಮತದಾನದಲ್ಲಿ ಕಮಲದ ಗುರುತಿಗೆ ಮತ ನೀಡಿ ಎಂದರು
ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶ್ರೀ ರಾಜೇಂದ್ರ ನಾಯ್ಕ, ಶಕ್ತಿಕೇಂದ್ರ ಪ್ರಮುಖರಾದ ಎಂ. ಎನ್. ಭಟ್, ನಗರ ಪ್ರಭಾರಿಯಾದ ಆರತಿ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.