ಅಂಕೋಲಾ:- ತಾಲೂಕಿನ ಅತ್ಯಂತ ವಿಶೇಷ ಉತ್ಸವ ಗಳಲ್ಲಿ ಒಂದಾದ ಶ್ರೀ ಶಾಂತದುರ್ಗಾ ದೇವರ ಬಂಡಿಹಬ್ಬ ಉತ್ಸವ ಮೇ ೫ ರ ವರೆಗೆ ನಡೆಯಲ್ಲಿದ್ದು , ಅಕ್ಷಯ ತೃತೀಯಾ ದಿನ ಶನಿವಾರ ಸಂಜೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬಂಡಿಹಬ್ಬದ ಕಳಸವನ್ನು ಸಮೀಪದ ಕುಂಬಾರಕೇರಿ ಮೂಲ ದೇವಸ್ಥಾನದಿಂದ ಅಲಂಕಾರಗೊಳಿಸಿ ಛತ್ರ ಚಾಮರದೊಂದಿಗೆ ಸಾಂಪ್ರದಾಯಿಕ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಶಾಂತದುರ್ಗಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವಿಯ ಕಳಸ ಸ್ವಾಗತಿಸಲು ಪಟ್ಟಣವನ್ನು ಭಕ್ತರು ತಳಿರು-ತೋರಣಗಳಿಂದ ಸಿಂಗರಿಸಿ ,ರಂಗೋಲಿ ಹಾಕಿದ್ದರು.
ಶ್ರೀ ದೇವರ ಕಳಸವನ್ನು ಉದಯ ಗಣಪತಿ ಗುನಗಾ ಹೊತ್ತು ಸಾಗಿದರು. ಅರ್ಚಕ ಗಣಪತಿ ಭಟ್,ಶ್ಯಾಮ್ ಭಟ್ ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು. ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿಗಳು ದೇವಸ್ಥಾನದ ಹಕ್ಕುದಾರರು ,ಕಟಗಿದಾರರು ,ಭಕ್ತಾಧಿಗಳು ಬಾಗವಹಿಸಿ ಉತ್ಸವದ ಮೆರಗು ಹೆಚ್ಚಿಸಿದರು.