ಉಚಿತ ಬಸ್ ಪ್ರಯಾಣ ಗ್ಯಾರಂಟಿಗೆ ಕಿಲೋಮೀಟರ್ ಮಿತಿ ನಿಗದಿಗೆ ಚಿಂತನೆ; ಫಲಾನುಭವಿಗಳ ಪಟ್ಟಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ


ಬೆಂಗಳೂರು: ಉಚಿತ ಬಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣದ ಮಿತಿಗೆ (ಕಿಲೋ ಮೀಟರ್) ಮಾನದಂಡ ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿಎಂ ಸಿದ್ಧರಾಮಯ್ಯ (Siddaramaiah) ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಉಚಿತ ಬಸ್ ಪಾಸ್, ಫಲಾನುಭವಿಗಳ ಪಟ್ಟಿ ನೀಡಿ ಎಂದು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಯುವ ನಿಧಿ ಗ್ಯಾರಂಟಿ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ.

ವಿದ್ಯಾರ್ಥಿಗಳಿಗೆ 7 ಕೋಟಿ ರೂ. ಅಂದಾಜು ವೆಚ್ಚ
ಪ್ರತಿ ವರ್ಷ ಸುಮಾರು 4.5 ಲಕ್ಷ ಪದವೀಧರರು ಪಾಸ್ ಔಟ್ ಆಗುತ್ತಾರೆ. ಪದವಿ ಪಾಸ್ ಆದವರಿಗೆ 135 ಕೋಟಿ ರೂಪಾಯಿ ಅಂದಾಜು (ಮಾಸಿಕ) ವೆಚ್ಚ ಆಗಲಿದೆ. ಇನ್ನು ಸುಮಾರು 45 ಸಾವಿರ ಡಿಪ್ಲೊಮಾ ವಿದ್ಯಾರ್ಥಿಗಳು ವಾರ್ಷಿಕವಾಗಿ ಪಾಸ್ ಔಟ್ ಆಗುತ್ತಾರೆ. ಡಿಪ್ಲೊಮಾ 1,500 ರೂಪಾಯಿ ಅಂದರೆ ವಿದ್ಯಾರ್ಥಿಗಳಿಗೆ ಮಾಸಿಕ ಸುಮಾರು 7 ಕೋಟಿ ರೂ. ಅಂದಾಜು ವೆಚ್ಚ ತಗುಲುತ್ತೆ. ಅನ್ನಭಾಗ್ಯ 1.27 ಕೋಟಿ ಬಿಪಿಎಲ್ ಕಾರ್ಡ್ದಾರರಿಗೆ ಪ್ರಯೋಜನವಾಗಲಿದ್ದು, 10 ಕೆ‌.ಜಿ ಅಕ್ಕಿ ಅನ್ನಭಾಗ್ಯದಡಿ ಸಿಗಲಿದೆ.
5 ಗ್ಯಾರಂಟಿಗಳಿಗೆ 50 ಸಾವಿರ ಕೋಟಿ ರೂ. ವೆಚ್ಚ ಸಾಧ್ಯತೆ
5 ಗ್ಯಾರಂಟಿಗಳಿಗೆ ವಾರ್ಷಿಕ ಒಟ್ಟು 50 ಸಾವಿರ ಕೋಟಿ ವೆಚ್ಚ ಸಾಧ್ಯತೆ ಎಂದು ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ರಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. BPL ಕಾರ್ಡ್ದಾರರಿಗೆ ‘ಗೃಹಲಕ್ಷ್ಮೀ’ ಯೋಜನೆಗೆ ವಾರ್ಷಿಕ 12 ಸಾವಿರ ಕೋಟಿ ವೆಚ್ಚ ಸಾಧ್ಯತೆ ಇದೆ.

ತೆರಿಗೆ ಹೆಚ್ಚಳ ಸಂಬಂಧ ಸಭೆಯಲ್ಲಿ ಸಮಾಲೋಚನೆ ಮಾಡಲಾಗಿದ್ದು, ಸಂಪನ್ಮೂಲ ಕ್ರೋಡೀಕರಣ ಹೇಗೆ ಎಂಬುದರ ಮಾಹಿತಿ ಸಂಗ್ರಹಿಸಲಾಗಿದೆ.