ಸಿದ್ದಾಪುರ : (ಉ.ಕ ) ಶಾಲಾ ಪ್ರಾರಂಭೋತ್ಸವ ಕ್ಕೆ ಭರದ ತಯಾರಿ


ಸಿದ್ದಾಪುರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗವಿನಗುಡ್ಡದಲ್ಲಿ 2023-24 ರ ಶೈಕ್ಷಣಿಕ ವರ್ಷದ ಪ್ರಾರಂಬೊತ್ಸವದ ನಿಮಿತ್ತ ಪೂರ್ವಭಾವಿಯಾಗಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಮಾಡುತ್ತಿರುವ ದೃಶ್ಯ ಕಂಡುಬoದಿತು. ಮೇ 31 ರಿಂದ ಶಾಲಾ ತರಗತಿಗಳು ಆರಂಭವಾಗಲಿದ್ದು ಸೋಮವಾರದಂದು ಪೂರ್ವ ತಯಾರಿ ನಡೆಸಲಾಯಿತು
ಶಾಲಾ ಎಸ್. ಡಿ. ಎಂ. ಸಿ ಮತ್ತು ಪಾಲಕರು ಮತ್ತು ಸ್ಥಳೀಯರ ಸಹಕಾರದಿಂದ ಶಾಲಾ ಸ್ವಚ್ಛತಾ ಕಾರ್ಯವು ನಡೆಯಿತು. ಶಾಲಾ ಕೊಠಡಿಗಳು, ಆವರಣ, ಕುಡಿಯುವ ನೀರಿನ ಮೂಲಗಳನ್ನು ಸ್ವಚ್ಛ ಗೊಳಿಸಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಅಧ್ಯಕ್ಷ ರವಿಕುಮಾರ ಎಂ ನಾಯ್ಕ, ಪ್ರಶಾಂತ ಅದಿದ್ರಾವಿಡ, ಗಣೇಶ ಅದಿದ್ರಾವಿಡ,ಪ್ರಕಾಶ ನಾಯ್ಕ,ಮಹೇಂದ್ರ ಹೆಗಡೆ, ನಿರಂಜನ ಹೆಗಡೆ, ಹಿತೇಂದ್ರ ನಾಯ್ಕ ರನ್ನು ಮುಖ್ಯಾಧ್ಯಾಪಕ ಗುರುರಾಜ ನಾಯ್ಕ ಶಿಕ್ಷಕ ಸತೀಶ ನಾಯ್ಕ ಅಭಿನಂದಿಸಿದರು.