ದಾಂಡೇಲಿಯ ಸೂಸೈಡ್ ದಿ ಲಾಸ್ಟ್ ಅಟೆಂಟ್ಟ್ ಕಿರು ಚಿತ್ರ ತಂಡಕ್ಕೆ ಸನ್ಮಾನ

ದಾಂಡೇಲಿ : ದಾಂಡೇಲಿಯ ಪ್ರತಿಭಾವಂತ ಯುವಕ ಹಾಗೂ ಅಭ್ಯಂತಾ ಯೂತ್ ಕ್ರಿಯೇಷನ್ಸ್ ಇದರ ಪ್ರವರ್ತಕರಾದ ಮನೋಹರ್ ಕಾಂಬಳೆ ಹಾಗೂ ಅವರ ನೇತೃತ್ವದ ಸೂಸೈಡ್ ದಿ ಲಾಸ್ಟ್ ಅಟೆಂಟ್ಟ್ ಕಿರು ಚಿತ್ರ ತಂಡಕ್ಕೆ ಹಳಿಯಾಳ ಪಟ್ಟಣದಲ್ಲಿರುವ ಕೆ.ಎಲ್.ಎಸ್ ವಿಡಿಐಟಿ ಕಾಲೇಜಿನಲ್ಲಿ ಸಂಸ್ಥೆಯ 19ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ನಿಮಿತ್ತ ಸೋಮವಾರ ಸಂಜೆ ಸನ್ಮಾನಿಸಲಾಯ್ತು.

ಕಾಲೇಜಿನ ಪ್ರಾಚಾರ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಅಭ್ಯಂತಾ ಯೂತ್ ಕ್ರಿಯೇಷನ್ಸ್ ಇವರ ಸೂಸೈಡ್ ದಿ ಲಾಸ್ಟ್ ಅಟೆಂಟ್ಟ್ ಕಿರು ಚಿತ್ರ ತಂಡವನ್ನು ಸನ್ಮಾನಿಸಿ, ಶುಭ ಹಾರೈಸಲಾಯ್ತು. ಈಗಾಗಲೆ ಹಲವಾರು ಪ್ರಶಸ್ತಿಗಳನ್ನು ಸೂಸೈಡ್ ದಿ ಲಾಸ್ಟ್ ಅಟೆಂಟ್ಟ್ ಕಿರು ಚಿತ್ರ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.