ದೇಶದ ಸ್ವಾತಂತ್ರ್ಯಕ್ಕೆ ರಕ್ತ ಚೆಲ್ಲಿದವರಿಗಾಗಿ ದಾಂಡೇಲಿಯಲ್ಲಿ ರಕ್ತದಾನ ಕಾರ್ಯಕ್ರಮ

ದಾಂಡೇಲಿ: ನಗರದ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು. ನಗರಸಭೆ ಉಪಾಧ್ಯಕ್ಷ ಸಂಜಯ ನಂದ್ಯಾಳಕ ಹಾಗೂ ಸಿಪಿಐ ಬಿ.ಎಸ್. ಲೋಕಾಪುರ ರಕ್ತದಾನ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ದಾಂಡೇಲಿ ತಾಲೂಕು ಘಟಕ, ಗೆಳೆಯರ ಬಳಗ, ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಸಂಘ ಹಾಗೂ ಹುಬ್ಬಳ್ಳಿಯ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 50 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಗಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರೇಮದ ಕಾವ್ಯ ಗಾಯನ, ಸ್ವಾತಂತ್ರ್ಯ ಸೌಹಾರ್ದತೆಯ ಕವನ ವಾಚನ’ ಕಾರ್ಯಕ್ರಮದಲ್ಲಿ ದೀಪಾಲಿ ಸಾವಂತ, ಮುರ್ತುಜಾ ಆನೆಹುಸೂರು, ಪ್ರವೀಣಕುಮಾರ ಸುಲಾಖೆ, ರಘುವೀರ ಗೌಡಾ, ಮಹಾಂತೇಶ ಅಂದಕಾರಿಮಠ, ಡಾ.ಉಮೇಶ ಹಳ್ಳಿಕೆರೆ, ಜಿ.ಎಸ್.ನಾಯ್ಕ ಬಾಗವಹಿಸಿ ಕವನ ವಾಚಿಸಿದರು. ಮಾನಸಾ ವಾಸರೆ ಕಾವ್ಯ ಗಾಯನ ಮಾಡಿದರು. ಜಯತ್.ಎಸ್.ಸಿ ಅವರಿಂದ ಕೊಳಲು ವಾದನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಪೌರಾಯುಕ್ತರ ರಾಜಾರಾಂ ಪವಾರ, ನಗರಸಭೆ ಅಧ್ಯಕ್ಷೆ ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಮೌಲಾಲಿ ಮುಲ್ಲಾ,ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ ಎನ್ ಹಾಗೂ ಪ್ರೆಸ್ ಕ್ಲಬ್ ನ ಅಧ್ಯಕ್ಷ ಕೃಷ್ಣಾ ಪಾಟೀಲ ಮುಂತಾದವರು ಇದ್ದರು.