ದಾಂಡೇಲಿ: ನಗರದ ಬರ್ಚಿ ರಸ್ತೆ ಜನತಾ ವಿದ್ಯಾಲಯ ಮುಂಭಾಗದಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿದ್ದ ಮರದ ಟೊಂಗೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ತೆರವು ಮಾಡಿದರು.
ಈ ಹಿಂದೆ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿದ್ದ ಮರಗಳ ಟೊಂಗೆಗಳನ್ನು ನಗರಾಡಳಿತ ತೆರವು ಮಾಡಿತ್ತು. ತಹಶೀಲ್ದಾರ್ ಮತ್ತು ಪೌರಾಯುಕ್ತರ ನೇತೃತ್ವದಲ್ಲಿ ಪತ್ರ ವ್ಯವಹಾರದ ನಂತರ ಅದಕ್ಕೆ ಸ್ಪಂದಿಸಿ ಅರಣ್ಯ ಇಲಾಖೆ ಈಗ ತೆರವು ಮಾಡುತ್ತಿದೆ ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.
ಮಳೆ, ಗಾಳಿಗೆ ಆಕಸ್ಮಿಕವಾಗಿ ಮರದ ಟೊಂಗೆಗಳು ಬಿದ್ದು ಅನಾಹುತ ಸಂಭವಿಸಿದೆ ಇರಲಿ ಎಂದು ಅಪಾಯಕಾರಿ ಟೊಂಗೆಗಳನ್ನು ತೆರವು ಅರಣ್ಯ ಇಲಾಖೆಯ ಮಾಡುತ್ತಿದೆ. ಇದಕ್ಕೆ ನಗರಸಭೆ ಸಹಕಾರವಿದೆ ಎನ್ನುತ್ತಾರೆ ಬಾಂಬುಗೇಟ್ ನಗರಸಭೆ ಸದಸ್ಯ ಮಹಾದೇವ ಜಮಾದಾರ.