ಯಲ್ಲಾಪುರ: ತಾಲೂಕಿನ ಬೀಗಾರಿನ ದಿಶಿತಾ ನರಸಿಂಹ ಕೋಮಾರ ಐ.ಸಿ.ಎಸ್.ಇ 10 ನೇ ತರಗತಿ ಪರೀಕ್ಷೆಯಲ್ಲಿ ದೇಶಕ್ಕೆ 3 ನೇ ಹಾಗೂ ಗುಜರಾತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮೂಲತಃ ಯಲ್ಲಾಪುರ ತಾಲೂಕಿನ ಬೀಗಾರಿನವರಾದ ದಿಶಿತಾ, ಅಹಮದಾಬಾದ್‌ನ ಆನಂದ ನಿಕೇತನ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು, ಐ.ಸಿ.ಎಸ್.ಇ 10 ನೇ ತರಗತಿ ಪರೀಕ್ಷೆಯಲ್ಲಿ ಶೇ.99.4 ಅಂಕ ಪಡೆದು ಈ ಸಾಧನೆ ಮಾಡಿದ್ದಾಳೆ.
8 ಹಾಗೂ 9 ನೇ ತರಗತಿಯಲ್ಲಿ ವಿಜ್ಞಾನ, ಗಣಿತ, ಸಾಮಾನ್ಯ ಜ್ಞಾನ, ಒಲಿಂಪಿಯಾಡ್ ಗಳಲ್ಲಿ ಚಿನ್ನದ ಪದಕ ಪಡೆದಿದ್ದಾಳೆ. ಓದಿನ ಜತೆಗೆ ಭರತನಾಟ್ಯ, ಚಿತ್ರಕಲೆ, ಚರ್ಚಾಸ್ಪರ್ಧೆಗಳಲ್ಲಿಯೂ ಸಾಧನೆ ಮಾಡಿದ್ದಾಳೆ. ಕಳೆದ ವರ್ಷ ಎ.ಎಸ್.ಐ.ಎಸ್.ಸಿ ಚರ್ಚಾ ಸ್ಪರ್ಧೆಯಲ್ಲಿ ನಾರ್ತ್ ವೆಸ್ಟ್ ವಲಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆ ಗುಜರಾತಿನ ಗಾಂಧಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆಗಿರುವ ಬೀಗಾರಿನ ನರಸಿಂಹ ಕೋಮಾರ ಮತ್ತು ಶಾರದಾ ಕೋಮಾರ ದಂಪತಿಯ ಪುತ್ರಿ.