ಹಳಿಯಾಳ : ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಮೂರು ದಿನಗಳವರೆಗೆ ಕಾರ್ಯನಿರ್ವಹಿಸಿದ್ದ ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು ಇಂದು ರಾತ್ರಿ ಹಳಿಯಾಳಕ್ಕೆ ಆಗಮಿಸಲಿದ್ದಾರೆ.
ನಾಳೆ ಹಳಿಯಾಳ ಪಟ್ಟಣದಲ್ಲಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಆನಂತರ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆಯನ್ನು ನಡೆಸಲಿದ್ದಾರೆ ಎಂದು ಹಳಿಯಾಳ ಪಟ್ಟಣದಲ್ಲಿರುವ ಶಾಸಕರ ಕಾರ್ಯಾಲಯವು ಇಂದು ಸೋಮವಾರ ಸಂಜೆ ಮಾಧ್ಯಮಕ್ಕೆ ಮಾಹಿತಿ ನೀಡಿದೆ.