ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ ಇದೇ ಬರಲಿರುವ ಜೂನ್:02ನೇ ವಾರದಿಂದ ಊಟ, ವಸತಿ ಸಹಿತ ಉಚಿತವಾಗಿ ಬಹು ಬೇಡಿಕೆಯ ಜೂಟ್ ಉತ್ಪನ್ನಗಳ ತಯಾರಿಕಾ ತರಬೇತಿ ಕಾರ್ಯಕ್ರಮವನ್ನು ದಾಂಡೇಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್ ಅವರು ಹೇಳಿದರು.
ಅವರು ಇಂದು ಹಳಿಯಾಳ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯಲ್ಲಿ ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇವತ್ತಿನ ದಿನಗಳಲ್ಲಿ ಅತೀ ಹೆಚ್ಚಿನ ಬೇಡಿಕೆಯಿರುವಂತಹ ಜೂಟ್ ಉತ್ಪನ್ನಗಳ ತಯಾರಿಕಾ ತರಬೇತಿ ಇದಾಗಿದೆ. ಒಟ್ಟು 13 ದಿನಗಳವರೆಗೆ ಈ ತರಬೇತಿ ನಡೆಯಲಿದ್ದು, ಈ ತರಬೇತಿಯಲ್ಲಿ ಜೂಟ್ ನಿಂದ ತಯಾರಿಸುವ ವಿವಿಧ ವಿನ್ಯಾಸದ, ಆಕರ್ಕಕವಾಗಿರುವ ಬ್ಯಾಗ್ ಗಳು, ಪರ್ಸ್ ಗಳು, ವೆನಿಟ್ ಬ್ಯಾಗ್, ಕಚೇರಿ ಬ್ಯಾಗ್ ಹೀಗೆ ಇನ್ನಿತರ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸುವ ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ. ಅನುಭವಿ ಮತ್ತು ನುರಿತ ತರಬೇತುದಾರರಿಂದ ಈ ತರಬೇತಿ ನಡೆಯಲಿದ್ದು, ಊಟ, ವಸತಿಯೊಂದಿಗೆ ತರಬೇತಿಯೂ ಸಂಪೂರ್ಣ ಉಚಿತವಾಗಿರುತ್ತದೆ. ಈ ತರಬೇತಿಯಲ್ಲಿ ಭಾಗವಹಿಸಲು ಆಸಕ್ತರಿರುವ 18 ರಿಂದ 45 ವರ್ಷ ವಯಸ್ಸಿನ ಮಹಿಳೆಯರು, ಪುರುಷರು ತಮ್ಮ ಹೆಸರು ಮತ್ತು ವಿಳಾಸವನ್ನು ಮೊಬೈಲ್ ವಾಟ್ಸಪ್ ಸಂಖ್ಯೆ :9449782425 ಗೆ ವಾಟ್ಸಪ್ ಮಾಡುವಂತೆಯು ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9482188780 ಗೆ ಸಂಪರ್ಕಿಸುವಂತೆ ಅನಂತಯ್ಯ ಆಚಾರ್ ಅವರು ತಿಳಿಸಿದ್ದಾರೆ.