ಹಳಿಯಾಳ : ರಾಜ್ಯದ ನೂತನ ಕಾಂಗ್ರೆಸ್ ಸರಕಾರದ ಎರಡನೆ ಹಂತದ ಸಚಿವರ ಪ್ರಮಾಣ ವಚನಕ್ಕೆ ದಿನಗಣನೆ ನಡೆಯುತ್ತಿದ್ದು, ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ದೆಹಲಿಯ ಕೈ ಕಮಾಂಡ್ ವರಿಷ್ಟರೊಂದಿಗೆ ಚರ್ಚೆ ನಡೆಸಿದ್ದಾರೆ.
ಹಳಿಯಾಳ, ದಾಂಡೇಲಿ, ಜೋಯಿಡಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರ್.ವಿ.ದೇಶಪಾಂಡೆಯವರು ನಿನ್ನೆಯಿಂದಲೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ ಮಾಹಿತಿ ಲಭ್ಯವಾಗಿದೆ. ರಾಜ್ಯ ವಿಧಾನ ಸಭೆಗೆ ಗರಿಷ್ಟ 9ನೇ ಬಾರಿಗೆ ಆಯ್ಕೆಯಾಗಿರುವ ಆರ್.ವಿ.ದೇಶಪಾಂಡೆಯವರು ಅನುಭವಿ ರಾಜಕಾರಣಿಯಾಗಿ, 2022-23ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಭಾಜನರಾಗಿದ್ದರು. ಈ ನಡುವೆ ದೇಶಪಾಂಡೆಯವರು ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂದವ್ಯವನ್ನಿಟ್ಟುಕೊಂಡಿರುವುದರಿಂದ ಅವರಿಗೆ ಸಚಿವ ಪದವಿ ನಿಶ್ಚಿತ ಎಂಬ ಮಾತು ತಾಲ್ಲೂಕಿನಲ್ಲಿ ಕೇಳಿ ಬರತೊಡಗಿದೆ.