ಹಳಿಯಾಳ: ಯಾರದೋ ಜೀವಕ್ಕೆ ಅಪಾಯ ಮಾಡುವ ಉದ್ದೇಶದಿಂದ ವಿಷ ಪದಾರ್ಥವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹಳಿಯಾಳ ಪೋಲಿಸರು ಬಂಧಿಸಿರುವ ಘಟನೆ ನಡೆದಿದೆ.
ಖಚಿತ ಮಾಹಿತಿ ಮೆರೆಗೆ ಪಟ್ಟಣದ ಚಿಬ್ಬಲಗೇರಿ ರಸ್ತೆಯ ಅಗ್ನಿಶಾಮಕ ಠಾಣೆ ಸಮೀಪ ಹಳಿಯಾಳ ಪಿಎಸ್ ಐ ಆನಂದ ರೆಡ್ಡಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿ ಪಟ್ಟಣದ ಮಂಜುನಾಥ ಎಮ್ ಎನ್ನುವಾತನನ್ನು ಬಂಧಿಸಿ ಆತನಿಂದ ತಂಪು ಪಾನಿಯ ಬಾಟಲ್ ಹಾಗೂ ಸಿರಿಂಜನಲ್ಲಿ ಇದ್ದ ವಿಷ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ವೇಳೆ ಪಟ್ಟಣದ ನಾಗರಾಜ ಹಾಗೂ ಆತನೊಂದಿಗೆ ಇದ್ದ ಇನ್ನೊರ್ವ ಆರೋಪಿ ಪರಾರಿಯಾಗಿದ್ದು ಅವರ ವಿರುದ್ದವೂ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.