ಮಳೆಯ ಅಬ್ಬರಕ್ಕೆ ಕುಸಿದ ಮನೆಯ ಗೋಡೆ

ಹಳಿಯಾಳ: ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಮನೆಯ ಗೋಡೆ ಕುಸಿದು ಬಿದ್ದಿದೆ. ತಾಲೂಕಿನ ಸಾತ್ನಳ್ಳಿ ಗ್ರಾಮದ ನಾರಾಯಣ ವಿಠ್ಠಲ ಬಡಿಗೇರ್ ಮನೆಯ ಗೋಡೆ ಬಿದ್ದು ಸಂಪೂರ್ಣ ಹಾನಿಗೊಳಗಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಮನೆಯ ಗೊಡೆ ಬೀಳುವ ಅನುಮಾನದಿಂದ ಮನೆಯಲ್ಲಿದ್ದವರು ಹೊರಗೊಡಿ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಗೊಡೆ ಬಿದ್ದು ಮನೆಯ ಛಾವಣಿಗೆ ಸಂಪೂರ್ಣ ಹಾನಿಯಾಗಿದೆ. ಗೋಡೆ ಕುಸಿದು ಬೀಳುವ ದೃಶ್ಯ ಲೈವ್ ವಿಡಿಯೋದಲ್ಲಿ ಸೆರೆಯಾಗಿದೆ.