ನೆಗೆಟಿವ್ ಬಿಟ್ಟು ಪಾಸಿಟಿವ್ ಆಗಿ ಯೋಚಿಸಿ, ಅಭಿಯಾನ ಯಶಸ್ವಿಗೊಳಿಸಿ: ರೂಪಾಲಿ ನಾಯ್ಕ್ ಕರೆ

ಕಾರವಾರ: ಹರ್ ಘರ್ ತಿರಂಗಾ ಅಭಿಯಾನದ ಕುರಿತು ಕೆಲವರು ನಕಾರಾತ್ಮಕ ಚಿಂತನೆಗಳನ್ನು ಮಾಡುವುದು ಬಿಡಬೇಕು. ಧ್ವಜ ಹಾರಿಸುವಾಗ ಅದು ಬಿದ್ದರೆ, ಸರಿಯಾಗಿ ಹಾರಿಸದಿದ್ದರೆ ಧ್ವಜಕ್ಕೆ ಅವಮಾನವಾಗುತ್ತದೆ ಎನ್ನುವ ರೀತಿಯಲ್ಲಿ ನೆಗೆಟಿವ್ ಥಿಂಕ್ ಮಾಡುವುದನ್ನು ಬಿಡಬೇಕು ಎಂದು ರೂಪಾಲಿ ನಾಯ್ಕ ಹೇಳಿದ್ದಾರೆ.

ನಮ್ಮ ದೇಶಪ್ರೇಮವನ್ನು ನಾವು ಮೆರೆಯಬೇಕು. ಧ್ವಜ ಹಾರಿಸುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ಅದು ಈ ಹಿಂದೆ ಎಲ್ಲರಿಗೂ ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಅದಕ್ಕೊಂದು ಅವಕಾಶ ದೊರೆತಿದೆ. ಹೀಗಾಗಿ ಎಲ್ಲ ಮುಂಜಾಗೃತೆಯನ್ನು ವಹಿಸಿಕೊಂಡು ಪಾಸಿಟಿವ್ ಆಲೋಚನೆಯನ್ನು ಮಾಡಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಿಕೊಂಡು ಯಾವುದೇ ತಪ್ಪಾಗದಂತೆ ದೇಶಪ್ರೇಮ ಮೆರೆಯಬೇಕು ಎಂದರು.

ಪ್ರಧಾನಿ ಮೋದಿಯವರು ಅನೇಕ ಯೋಜನೆಗಳ ಮೂಲಕ ಭಾರತವನ್ನು ಒಂದು ಒಳ್ಳೆಯ ಹಂತಕ್ಕೆ ತಲುಪಿಸಿದ್ದಾರೆ. ಅವರ ಕರೆಗೆ ಸ್ಪಂದಿಸಿ ಎಲ್ಲರೂ ಒಗ್ಗಟ್ಟಾಗಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.