ಭಾಸ್ಕೇರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ಸೇವಾ ಕಾರ್ಯ: ವಿದ್ಯಾರ್ಥಿಗಳಿಗೆ ಬ್ಯಾಗ್-ಕೊಡೆ ವಿತರಣೆ, ಉಚಿತ ದಂತ ತಪಾಸಣೆ

ಹೊನ್ನಾವರ:
ತಾಲೂಕಿನ ಭಾಸ್ಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ನವರಿಂದ ವಿದ್ಯಾರ್ಥಿಗಳಿಗೆ ಬ್ಯಾಗ ಮತ್ತು ಕೊಡೆಯ ವಿತರಣೆ ನಡೆಯಿತು. ಜೊತೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಉಚಿತ ದಂತ ತಪಾಸಣಾ ಶಿಬಿರವು ನಡೆಯಿತು.

ಲಯನ್ ಉಪಾಧ್ಯಕ್ಷರಾದ ಎನ್. ಜಿ. ಭಟ್ ರವರು ಮಾತನಾಡಿ ಲಯನ್ಸ್ ಕ್ಲಬ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು ಸೇವೆಯು ಅದರ ಮುಖ್ಯ ಉದ್ದೇಶ ಎಂದು ಹೇಳಿದರು. ರೀಜನಲ್ ಚೇರ್ ಪರ್ಸನ್ ಲಯನ್ ರಾಜೇಶ್ ಸಾಳೆಹಿತ್ತಲ್ ಲಯನ್ಸ್ ಕ್ಲಬ್ ನ ಸಾಧನೆಗಳನ್ನು ತಿಳಿಸಿದರು.

ಸೆಕ್ರೆಟರಿಯವರಾದ ಲಯನ್ ಶ್ರೀಕಾಂತ್ ಹೆಗಡೆಕರ್ ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳು ಸಾಕಷ್ಟು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಲಯನ್ಸ್ ಕ್ಲಬ್ ಯಾವಾಗಲೂ ಸರಕಾರಿ ಶಾಲೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಸರಕಾರಿ ಶಾಲೆಯ ಕುರಿತು ಅಭಿಮಾನದ ಮಾತುಗಳನ್ನಾಡಿದರು. ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾದ ಲಯನ್ಸ್ ಡಾ. ನಾಗರಾಜ್ ಬೋಸ್ಕಿ ಹಲ್ಲಿನ ಮಹತ್ವ ಮತ್ತು ರಕ್ಷಣೆಯ ಕುರಿತು ತಿಳಿಸಿದರು.

ಸೆಕ್ರೆಟರಿಯವರಾದ ಲಯನ್ ಶ್ರೀಕಾಂತ್ ಹೆಗಡೆಕರ್, ಲಯನ್ ಎಮ್.ವಿ.ಹೆಗಡೆ, ಲಯನ್ ನರಸಿಂಹ ಪಂಡಿತ್, ಶಾಲೆಯ ಎಸ್. ಡಿ.ಎಂ.ಸಿ.ಅಧ್ಯಕ್ಷರು ಮತ್ತು ಸದಸ್ಯರು, ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಡಾ. ನಾಗರಾಜ್ ಬೋಸ್ಕಿ ಮತ್ತು ಡಾ.ಸಹನ ದಂತ ತಪಾಸಣೆಯನ್ನು ನಡೆಸಿಕೊಟ್ಟರು. ಲಯನ್ ರಾಜೇಶ್ ಸಾಳೆಹಿತ್ತಲ್, ಲಯನ್ ಚಂದ್ರಕಾಂತ್ ನಾಯ್ಕ್, ಲಯನ್ ನಾಗರಾಜ ಬೊಸ್ಕಿ ಪ್ರಾಯೋಜಕತ್ವ ವಹಿಸಿದ್ದರು. ಮುಖ್ಯ ಶಿಕ್ಷಕಿ ಸರಸ್ವತಿ ಹೆಗಡೆ ಸರ್ವರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರತಿಮಾ ಹೆಗಡೆ ನಿರೂಪಿಸಿ ಅಭಿನಂದಿಸಿದರು.