ಹಳಿಯಾಳ: ಪಟ್ಟಣದ ಫಿಶ್ ಮಾರ್ಕೇಟ್ ಸರ್ಕಲ್ ಬಳಿ ಅಕ್ರಮವಾಗಿ ಮಟಕಾ-ಜೂಜು ನಡೆಸುತ್ತಿದ್ದ ಅಡ್ಡೆಯ ಮೇಲೆ ಹಳಿಯಾಳ ನೂತನ ಪಿಎಸ್ ಐ ವಿನೋದ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪೋಲಿಸರ ಕಾರ್ಯಾಚರಣೆ ವೇಳೆ ಆರೊಪಿ ಪರಶುರಾಮ ಬೈಲಪ್ಪಗೋಳ ಎಂಬಾತನನ್ನು ಬಂಧಿಸಿ ಆತನಿಂದ ಓಸಿ, ಜೂಜಾಟದ ಸಾಮಾಗ್ರಿ ಹಾಗೂ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಆರೋಪಿ ಪರಶುರಾಮನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಓಸಿ- ಮಟಕಾ ಜೂಜಾಟದ ಪ್ರಮುಖ ವ್ಯಕ್ತಿ ಚಂದ್ರಕಾಂತ ಸಿದ್ಧಪ್ಪ ಗೋಂದಳಿ ಹೆಸರು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಆರೋಪಿ ಪರಶುರಾಮ ಮತ್ತು ಪ್ರಮುಖ ಓಸಿ ಬುಕ್ಕಿ ಚಂದ್ರಕಾಂತ ಸಿದ್ದಪ್ಪ ಗೋಂದಳಿ ವಿರುದ್ದ ಪ್ರಕರಣ ದಾಖಲಾಗಿದೆ. ಓಸಿ ಬುಕ್ಕಿ ಚಂದ್ರಕಾಂತ ಪರಾರಿಯಾಗಿದ್ದು ಪೋಲಿಸರು ಈತನನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಕ್ರೈಂ ಪಿಎಸ್ ಐ ಉಮಾ ಬಸರಕೋಡ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.