ಹಳಿಯಾಳ: ಹಳಿಯಾಳದ ಖ್ಯಾತ ಅಂತರಾಷ್ಟ್ರೀಯ ಕುಸ್ತಿಪಟು ಸೂರಜ್ ಅಣ್ಣಿಕೇರಿ ಅವರು ಮತ್ತೆ ಎರಡೆರಡು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಹರಿಹರದಲ್ಲಿ ದಿ.15 ರಂದು ನಡೆದ 20 ವಯಸ್ಸಿನ ವಯೋಮಿತಿ ಒಳಗಿನ (57) ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಇದೇ ತಿಂಗಳ ದಿ. 24 ರಿಂದ 26 ರವೆಗೆ ಹರಿಯಾಣಾ ರಾಜ್ಯದ ರೊಹಟಕನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಫೆಡರೇಶನ್ ಕಪ್ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಇನ್ನು ಹರಿಹರದಲ್ಲೇ ದಿ.16 ರಂದು ನಡೆದ 23 ವಯಸ್ಸಿನ ವಯೋಮಿತಿ ಒಳಗಿನ (57) ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಸಪ್ಟೆಂಬರ್ 1 ರಿಂದ 4 ರವೆಗೆ ಕೆರಳ ರಾಜ್ಯದಲ್ಲಿ ನಡೆಯಲಿರುವ ನ್ಯಾಷನಲ್ ಚಾಂಪಿಯನಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದವರಾಗಿರುವ ಸೂರಜ್ ಹಳಿಯಾಳ ಕ್ರೀಡಾ ಹಾಸ್ಟೆಲ್ ನ ವಿದ್ಯಾರ್ಥಿಯಾಗಿದ್ದು ಹಳಿಯಾಳ ಪೋಲಿಸ್ ಠಾಣೆಯ ಎಎಸ್ ಐ ಸಂಜು ಅಣ್ಣಿಕೇರಿ ಅವರ ಪುತ್ರರಾಗಿದ್ದಾರೆ.