ಹಳಿಯಾಳ -ದಾಂಡೇಲಿ ಹೆದ್ದಾರಿಯಲ್ಲಿ ಟ್ರಕ್ಕ್ ಗಳ ನಡುವೆ ಅಪಘಾತ – ಇಬ್ಬರಿಗೆ ಗಾಯ

ಹಳಿಯಾಳ :ತಾಲ್ಲೂಕಿನ ಹಳಿಯಾಳ -ದಾಂಡೇಲಿ ಹೆದ್ದಾರಿಯಲ್ಲಿ ಅಜಗಾಂವ್ ಕ್ರಾಸ್ ಹತ್ತಿರ ಎರಡು ಟ್ರಕ್ಕುಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಚಾಲಕರಿಗೆ ಗಾಯವಾಗಿರುವ ಘಟನೆ ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.

ಹಳಿಯಾಳ ಕಡೆಯಿಂದ ಪೋಲ್ಸ್ ತುಂಬಿಕೊಂಡು ದಾಂಡೇಲಿಗೆ ಬರುತ್ತಿದ್ದ ಕೆಎ: 15-8987 ಸಂಖ್ಯೆಯ ಟ್ರಕ್ ಮತ್ತು ದಾಂಡೇಲಿಯಿಂದ ಹಳಿಯಾಳದ ಕಡೆಗೆ ಹೋಗುತ್ತಿದ್ದ ಕೆಎ: 52 – 5669 ಟ್ರಕ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡು ಟ್ರಕ್ ಗಳ ಚಾಲಕರುಗಳಿಗೆ ಗಾಯವಾಗಿದೆ. ಗಾಯಗೊಂಡವರನ್ನು ತಕ್ಷಣವೆ ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.