ದಾಂಡೇಲಿ : ನಗರದ ಬಂಗೂರನಗರ ಕಲಾ, ವಿಜ್ಞಾನ & ವಾಣಿಜ್ಯ ಮಹಾವಿದ್ಯಾಲಯದ ಅರ್ಥಶ್ಯಾಸ್ತ್ರ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಪ್ರೊ. ಶಂಕರ.ಎಸ್. ಕಂಧಾರೆಯವರು ಅರ್ಥಶ್ಯಾಸ್ತ್ರದಲ್ಲಿ “ಮೈಗ್ರೇಶನ್ ಆಫ್ ಅಗ್ರಿಕಲ್ಚರಲ್ ಲೆಬರರ್ಸ್ ಆ್ಯಂಡ್ ದೇರ್ ಸೊಶಿಯೋ-ಎಕನಾಮಿಕ್ ಕಂಡಿಷನ್ಸ್ ಇನ್ ವಿಜಯಪುರ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಸ್ಟೇಟ್” ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಪಿಎಚ್.ಡಿ ಕೋರ್ಸ್ ವರ್ಕ್ ನಲ್ಲಿ ಎ + ಗ್ರೇಡ್ ಪಡೆದು ಉತ್ತೀರ್ಣರಾಗಿದ್ದ ಇವರಿಗೆ ಕ.ವಿ.ವಿ. ಅರ್ಥಶ್ಯಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ & ಮುಖ್ಯಸ್ಥರಾದ ಡಾ.ಎಚ್.ಎಚ್.ಭರಡಿಯವರು ಮಾರ್ಗದರ್ಶನ ಮಾಡಿದ್ದರು. ಪ್ರೊ.ಶಂಕರ.ಎಸ್.ಕಂಧಾರೆಯವರ ಸಾಧನೆಗೆ ಬಂಗೂರನಗರ ಪದವಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರು, ಪ್ರಾಧ್ಯಾಪಕ ವೃಂದದವರು ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.