ದಾಂಡೇಲಿ: ತಾಲೂಕಿನ ಕೇರವಾಡದ ಶ್ರೀನಿಧಿ-ಶ್ರೇಯಸ್ ಕಾಗದ ಕಾರ್ಖಾನೆಯಲ್ಲಿ ಟೈಮ್ ಕೀಪರ್ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಗಣೇಶ ವಾಳ್ಕೆ (45) ಮೃತಪಟ್ಟ ಕಾರ್ಮಿಕ. ಕಾರ್ಖಾನೆಯು ಕಾರ್ಮಿಕರಿಗೆ ಕಳೆದ ಆರೇಳು ತಿಂಗಳಿಂದ ವೇತನ ಪಾವತಿ ಮಾಡಿರದ ಕಾರಣ ಮಾನಸಿಕ ಒತ್ತಡ ಒಳಗಾಗಿ ಹೃದಯಾಘಾತ ಆಗಿದೆ ಎಂದು ಸಹ ಕಾರ್ಮಿಕರು ಹೇಳುತ್ತಿದ್ದಾರೆ.
ಕಾರ್ಖಾನೆ ಮಾಲೀಕರು ಬರುವವರೆಗೆ ಕಾರ್ಮಿಕನ ಶವವನ್ನು ತೆಗೆಯುವುದಿಲ್ಲ ಎಂದು ಸರ್ಕಾರಿ ಆಸ್ಪತ್ರೆಯ ಮುಂದೆ ಜಮಾವಣೆಗೊಂಡ ಕಾರ್ಮಿಕರು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಗ್ರಾಮೀಣ ಠಾಣೆಯಲ್ಲಿ ಪಿಎಸ್ಐ ಕೃಷ್ಣಾ ಅರಿಕೇರಿ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.