ದಾಂಡೇಲಿ ಸಮಗ್ರ ಅಭಿವೃದ್ಧಿಗೆ ವಿವಿಧ ಸಂಘಟನೆಗಳಿಂದ ಒತ್ತಾಯ

ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮತ್ತು ವಿವಿಧ ಸಂಘ ಸಂಸ್ಥೆ ವತಿಯಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಮತ್ತು ಮಂತ್ರಿಗಳಿಗೆ ಶಾಸಕರಿಗೆ ಮನವಿ ನೀಡುವುದಾಗಿ ತಿಳಿಸಿದರು

  • ದಾಂಡೇಲಿ ತಾಲೂಕ ಆಗಿ 5 ವರ್ಷಗಳಾದರೂ ಇದುವರೆಗೂ ತಾಲೂಕಿಗೆ ಸಂಬಂಧ ಪಟ್ಟ ಕಚೇರಿಗಳು ಸ್ಥಾಪನೆ ಆಗಬೇಕೆಂದು ಒತ್ತಾಯ.
  • ದಾಂಡೇಲಿ ಸಾರ್ವಜನಿಕ ಆಸ್ಪತ್ರೆಯನ್ನು ತಾಲೂಕಾ ಆಸ್ಪತ್ರೆಯನ್ನಾಗಿ ಘೋಷಣೆ ಮಾಡಬೇಕು. ಹಾಗೂ ಮೇಲ್ದರ್ಜೆಗೆ ಏರಿಸಬೇಕು
  • ಪ್ರಯಾಣಿಕರ ರೈಲ್ವೇಯನ್ನು ಪುನಃರಾಂಬಿಸಬೇಕು. ದಾಂಡೇಲಿಯಿಂದ ಬೆಂಗಳೂರು ರೈಲ್ವೆ ಪ್ರಾರಂಭಸಬೇಕು
  • ನಗರ ಸಾರಿಗೆ ಹಾಗೂ ಸಾರಿಗೆ ವ್ಯವಸ್ಥೆಯನ್ನು ಸರಿಪಡಿಸಬೇಕು

ಮುಂತಾದ ವಿಚಾರಗಳಿಗೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷರಾದ ಅಕ್ರಮ್ ಖಾನ್ ಮಾತನಾಡಿ ಈ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರು ಸೂಕ್ತ ಕ್ರಮ ವಹಿಸದೇ ಇದ್ದಲಿ ದಾಂಡೇಲಿ ತಾಲೂಕಿನ ವಿವಿಧ ಸಂಘಟನೆಗಳು ಅನಿವಾರ್ಯವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರವೇ ಅಧ್ಯಕ್ಷ ಸಾಧಿಕ ಮುಲ್ಲಾ ಮಾತನಾಡುತ್ತಾ ದಾಂಡೇಲಿ ತಾಲೂಕಾಗಿ ಸುಮಾರು 5 ವರ್ಷಗಳಾದರೂ ಇದುವರೆಗೂ ಯಾವುದೇ ಅಭಿವೃದ್ಧಿ ಆಗ್ತಾಇಲ್ಲ.ತಾಲೂಕಿಗೆ ಸಂಬಂಧಪಟ್ಟ ಕಚೇರಿಗಳಿಲ್ಲ. ಹಲವಾರು ಸಮಸ್ಯೆಗಳಿಗೆ ಸಂಬಂಧ ಪಟ್ಟ ಇಲಾಖೆಯವರೂ . ಜಿಲ್ಲಾಧಿಕಾರಿಗಳು, ನಗರಾಡಳಿತ ಎಲ್ಲರೂ ಸೂಕ್ತ ಕ್ರಮವಹಿಸಬೇಕು ಇಲ್ಲವಾದರೆ ಇನ್ನು ಮುಂದೆ ದಾಂಡೇಲಿ ಅಭಿವೃದ್ಧಿಗಾಗಿ ಉಗ್ರವಾದ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಜ್ಜಾಗಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಲೀಲಾವತಿ, ಶೇಹಜಾದಿ ಕುಸಲಾಪೂರ, ರೇಷ್ಮಾ ಮೆಟಗುಡ್ಡ, ಆಯಿಷಾ ಮುಕಾಶಿ, ಕರವೇ ವಿದ್ಯಾರ್ಥಿ ಘಟಕ ಅಧ್ಯಕ್ಷರು ವಾಹನ ಚಾಲಕರ ಸಂಘದ ಅಧ್ಯಕ್ಷರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.