ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ‘ಮುದ್ದು ಕೃಷ್ಣ ಮತ್ತು ಮುದ್ದು ರಾಧೆ’ ಸ್ಪರ್ಧೆ

ಭಟ್ಕಳ: ತಾಲೂಕಾ ಗಾಣಿಗ ಸೇವಾ ಸಂಘ, ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ಭಟ್ಕಳ,
ಶ್ರೀ ಮುಗುಳಿಕೋಣೆ  ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಇವರ ಸಹಯೋಗದಲ್ಲಿ ನಡೆದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ‘ಮುದ್ದು ಕೃಷ್ಣ ಮತ್ತು ಮುದ್ದು ರಾಧೆ’ ಸ್ಪರ್ಧೆಯು ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಸಂಭ್ರಮದಿಂದ ನೆರವೇರಿತು.

ಭಟ್ಕಳ ತಾಲೂಕಿನ 6 ವರ್ಷದೊಳಗಿನ ಸುಮಾರು 50 ಕ್ಕಿಂತ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿ ನೆರೆದವರ ಮೆಚ್ಚುಗೆಗೆ ಪಾತ್ರರಾದರು. ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪುನರ್ವಿ ರಾಜೇಶ್ ಶೆಟ್ಟಿ ಬಸ್ತಿ, ದ್ವಿತೀಯ ಬಹುಮಾನ ಅದ್ವಿಕಾ ಪ್ರವೀಣ್ ಶಿರಾಲಿ, ತೃತೀಯ ಬಹುಮಾನ, ಸಾನ್ವಿ ಸತೀಶ್ ಶೆಟ್ಟಿ ಮುಟ್ಟಳ್ಳಿ ಸಮಾಧಾನಕರ ಬಹುಮಾನ ಸಾತ್ವಿಕ ಭಟ್ಕಳ ಹಾಗೂ ಶ್ರಾವಣ್ಯ ಕಿರಣ್ ಶೆಟ್ಟಿ ಬಸ್ತಿ ಪಡೆದುಕೊಂಡರು.

ಮುದ್ದು ರಾಧೆ ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ ಸಮನ್ವಿ ಗಿರೀಶ ಶೆಟ್ಟಿ ಬಸ್ತಿ, ದ್ವಿತೀಯ ಬಹುಮಾನ
ಗಾನ್ವಿತಾ ಮೋಹನ್ ಮೊಗೇರ್ ಹೆರಾಡಿ, ತೃತೀಯ ಬಹುಮಾನ ಅದ್ವಿತ ಸುರೇಂದ್ರ ಆಚಾರ್ಯ ಜಾಲಿ
ಸಮಾಧಾನಕರ ಬಹುಮಾನ  ದಿಶಾ ಭಾಸ್ಕರ ನಾಯ್ಕ ಬಸ್ತಿ ಹಾಗೂ ಅನನ್ಯಾ ಶ್ರೀಧರ್ ಶೆಟ್ಟಿ ಹೆರ್ತಾರ್ ಪಡೆದುಕೊಂಡರು. ಲಕ್ಕಿಡಿಪ್ ಮೂಲಕ ಆಯ್ಕೆಯಾದ ಅದೃಷ್ಟವಂತ ರಾಧಾಕೃಷ್ಣ ಪಾಲಕರ  ಬಹುಮಾನ   ಕಿರಣ್ ಶೆಟ್ಟಿ ಮತ್ತು ಅರುಣಾ ಶೆಟ್ಟಿ ದಂಪತಿಗಳು  ಪಡೆದುಕೊಂಡರು.

ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿದ  ಡಾ. ವಿರೇಂದ್ರ ಶಾನಭಾಗ ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಮೃತ್ಯುವಿನಿಂದ ಅಮರತ್ವದ ಕಡೆಗೆ, ಎನ್ನುವ ಕಲ್ಪನೆ ಅತ್ಯಂತ ಸುಂದರ ಎನಿಸಿದರೂ, ಗುರಿಮುಟ್ಟಿಸುವ ಗುರು ಯಾರು ಎನ್ನುವುದು ಇಂದಿನ ಪ್ರಶ್ನೆಯಾಗಿದೆ ಎಂದರು.

ಮುದ್ದು ರಾಧಾ ಮುದ್ದು ಕೃಷ್ಣ ಸ್ಪರ್ಧೆಯನ್ನು ಕಳೆದ 4 ವರ್ಷಗಳಿಂದ ವಿನೂತನವಾಗಿ, ವಿಶಿಷ್ಟವಾಗಿ ಅಯೋಜನೆ ಮಾಡುತ್ತಿದ್ದಾರೆ. ಕೇವಲ ಸ್ಪರ್ಧಾ ಕಾರ್ಯಕ್ರಮವಲ್ಲದೆ ಶ್ರೀ ಕೃಷ್ಣ ಜನ್ಮೋತ್ಸವದ ಆಚರಣೆಯ ಮಹತ್ವವನ್ನು ಸಾರುವ  ಭಗವದ್ಗಗೀತಾ ಪಠಣ, ಶ್ರೀಕೃಷ್ಣ ನೃತ್ಯೋತ್ಸವ, ಭಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಮಾಡುವುದರ ಮೂಲಕ ಜನ ಮನ್ನಣೆಗಳಿಸಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕಾ ಗಾಣಿಗ ಸೇವಾ ಸಂಘದ ಅಧ್ಯಕ್ಷ ಸುಭಾಷ ಶೆಟ್ಟಿ ಮಾತನಾಡಿ ಮುದ್ದು ಮಕ್ಕಳಲ್ಲಿ ನಮ್ಮ ಭಾರತೀಯ  ಸಂಸ್ಕೃತಿಯನ್ನು ಬಿತ್ತುವುದರ ಮೂಲಕ ಸಮಾಜಕ್ಕೆ ಉತ್ತಮ ನಾಗರಿಕರನ್ನು ನೀಡುವ ಜವಾಬ್ದಾರಿಯನ್ನು ನಾವೆಲ್ಲ ಹೊಂದಿದ್ದೇವೆ ಎಂದರು.

ವಿಜೇತರಾದ ಮಕ್ಕಳಿಗೆ ನಗದುಹಣ, ಫಲಕ, ಪ್ರಶಸ್ತಿ ಪತ್ರ, ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನಾ ಪತ್ರ ನೀಡಲಾಯಿತು. ದಿ ನ್ಯೂ ಇಂಗ್ಲಿಷ್‌ ಪಿ.ಯು ಕಾಲೇಜಿನ ಸಂಧ್ಯಾ ಬೈಂದೂರ ತಂಡದವರಿಂದ ಶ್ರೀಕೃಷ್ಣ ನೃತ್ಯೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ನಿರ್ಣಾಯಕರಾಗಿ , ಚನ್ನವೀರ ಹೊಸಮನಿ, ನಾರಾಯಣ ಮೊಗೇರ, ಗೀತಾ ಶಿರೂರ ಕರ್ತವ್ಯ ನಿರ್ವಹಿಸಿದರು.

ಮುಖ್ಯ ಅತಿಥಿಗಳಾಗಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ, ಉಪಾಧ್ಯಕ್ಷ ರಾಧಾ ಶೆಟ್ಟಿ. ಗಜಾನನ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಪ್ರಕಾಶ ಶಿರಾಲಿ ಪ್ರಾಸ್ತಾವಿಕ, ಮಾತನಾಡಿದರು. ಕಾರ್ಯದರ್ಶಿ ಮನೋಜ ಶೆಟ್ಟಿ, ಉಷಾ ಶೆಟ್ಟಿ, ಖಜಾಂಚಿ ರಾಜೇಶ ಶೆಟ್ಟಿ ಮುಂತಾದವರಿದ್ದರು.