ದಾಂಡೇಲಿ-ಹಳಿಯಾಳ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಹೊಂಡಕ್ಕಿಳಿದ ಬಸ್

ದಾಂಡೇಲಿ : ಹಳಿಯಾಳ- ದಾಂಡೇಲಿ ಹೆದ್ದಾರಿಯ ಆಲೂರು ಎಂಬಲ್ಲಿ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ರಸ್ತೆ ಪಕ್ಕದ ಹೊಂಡಕ್ಕಿಳಿದ ಘಟನೆ ನಡೆದಿದೆ.

ಹಳಿಯಾಳ ಬಸ್ ನಿಲ್ದಾಣದಿಂದ ಪ್ರಯಾಣಿಕರು ಕರೆದುಕೊಂಡು ದಾಂಡೇಲಿಗೆ ಬರುತ್ತಿದ್ದ ಕೆಎ:42, ಎಫ್:991 ಸಂಖ್ಯೆಯ ಸಾರಿಗೆ ಘಟಕದ ಬಸ್ ಚಾಲಕನ ನಿಯಂತ್ರಣ ತಪ್ಪಿ ಆಲೂರು ಎಂಬಲ್ಲಿ ರಸ್ತೆ ಬಿಟ್ಟು ರಸ್ತೆ ಪಕ್ಕದ ಹೊಂಡಕ್ಕಿಳಿದಿದೆ. ಬಸ್ಸಿನಲ್ಲಿ ಪ್ರಯಾಣಿಕರು ಇದ್ದರೂ ಯಾವುದೇ ರೀತಿಯಲ್ಲಿ ಗಾಯ ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.