ಹಳಿಯಾಳ : ಜೈ ಸಂಘಟನೆಯ ಜಿಲ್ಲಾ ಸಂಚಾಲಕರು ಹಾಗೂ ಸಾಮಾಜಿಕ ಹೋರಾಟಗಾರರಾಗಿದ್ದ ಹಳಿಯಾಳ ಪಟ್ಟಣದ ಯಲ್ಲಾಪುರ ನಾಕಾ ಹತ್ತಿರದ ನಿವಾಸಿ ಮಂಜುನಾಥ್ ಚಲವಾದಿಯವರು ಹೃದಯಾಘಾತಕ್ಕೊಳಗಾಗಿ ವಿಧಿವಶರಾದರು. ಮೃತರಿಗೆ 45 ವರ್ಷ ವಯಸ್ಸಾಗಿತ್ತು.
ಹಳಿಯಾಳ ಪಟ್ಟಣದಲ್ಲಿ ವರ್ತಕರಾಗಿದ್ದ ಮಂಜುನಾಥ್ ಚಲವಾದಿಯವರು ಸರಳ,ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ಓರ್ವ ತಮ್ಮ, ತಂಗಿ, ಪತ್ನಿ, ಇಬ್ಬರು ಹೆಣ್ಮಕ್ಕಳು, ಓರ್ವ ಪುತ್ರ ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ತಾಲ್ಲೂಕಿನ ಗಣ್ಯರನೇಕರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ. ಮೃತರ ಅಂತ್ಯಸಂಸ್ಕಾರವೂ ಇಂದು ಸೋಮವಾರ ಜರುಗಿತು.