ಬೆಂಗಳೂರು: ಎರಡು ಬಾರಿ ಮುಂದೂಡಿಕೆಯಾಗಿ ನಾಳೆ ನಡೆಯಲಿರುವ ಜನೋತ್ಸವ (ಜನಸ್ಪಂದನ) ಕಾರ್ಯಕ್ರಮ ನಿರ್ವಿಘ್ನವಾಗಿ ನಡೆಯಲಿ ಎಂದು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಹೋಮ, ಹವನ ನಡೆಸಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ಬಳಿ ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮದ ವೇದಿಕೆ ಮೇಲೆ ಶುಕ್ರವಾರ ಸಚಿವ ಸುಧಾಕರ್ ವಿಶೇಷ ಪೂಜಾ ಕಾರ್ಯಕ್ರಮಗಳನ್ನ ನಡೆಸಿದ್ದಾರೆ. ಹತ್ತು ಮಂದಿ ಆರ್ಚಕರ ನೇತೃತ್ವದಲ್ಲಿ ಗಣಹೋಮ, ವಿಷ್ಣುಹೋಮ ನೇರವೇರಿಸಿ, ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳು ಬಾರದೆ ಇರಲಿ ಎಂದು ಪೂರ್ಣಾಹುತಿ ನೇರವೇರಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ಒಂದು ವರ್ಷ ತುಂಬಿದ ಹಿನ್ನೆಲೆ ಮತ್ತು ಬಿಜೆಪಿ ಸರ್ಕಾರದ ಮೂರು ವರ್ಷದ ಆಡಳಿತ ಮುಗಿದ ಪ್ರಯುಕ್ತ ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ ನಡೆಸಲು ತೀರ್ಮಾನಿಸಿದೆ.