ವಕೀಲ ಜಿ ಟಿ ನಾಯ್ಕರಿಗೆ ಉನ್ನತ ಸ್ಥಾನಮಾನ ನೀಡುವಂತೆ ಅಭಿಮಾನಿ ಬಳಗದ ಒತ್ತಾಯ

ಅಂಕೋಲಾ: ಕಾರವಾರದ ಖ್ಯಾತ ವಕೀಲ, ಕಾಂಗ್ರೆಸ್ ಮುಖಂಡ ಜಿ ಟಿ ನಾಯ್ಕ ದೀನದಲಿತರ ಮತ್ತು ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದ್ದು ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಉನ್ನತ ಸ್ಥಾನಮಾನ ನೀಡುವಂತೆ ಅಂಕೋಲಾ ಜಿ. ಟಿ ನಾಯ್ಕ (ಅಲ್ಪಸಂಖ್ಯಾತರ) ಅಭಿಮಾನ ಬಳಗದ ಸದಸ್ಯರು ಬೇಡಿಕೆ ಸಲ್ಲಿಸಿದ್ದಾರೆ. ಈ ಕುರಿತು ಅಂಕೋಲಾ ಅಲ್ಪಸಂಖ್ಯಾತರ ಅಭಿಮಾನಿ ಬಳಗದಿಂದ ಶನಿವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಜಿ. ಟಿ. ನಾಯ್ಕರು ಅಪ್ಪಟ ಕಾಂಗ್ರೇಸಿಗರಾಗಿದ್ದು ಜಿಲ್ಲೆಯಲ್ಲಿ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ರೈತರು ಬಡವರ ಪರ ಹಲವಾರು ಹೋರಾಟ ಮಾಡಿದ್ದಾರೆ. ನ್ಯಾಯಕ್ಕಾಗಿ ಸಂಘಟನೆ ಮಾಡಿ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ. ಜಿ ಟಿ ನಾಯ್ಕ ಅವರಲ್ಲಿ ಕಷ್ಟ ಎಂದು ಬಂದವರಿಗೆ ಬರಿಗೈಲಿ ಹಿಂದೆ ಕಳುಹಿಸಿದ ಸಂದರ್ಭವೇ ಇಲ್ಲ. ಬಡವರ ಮದುವೆ, ಶುಭ ಕಾರ್ಯಕ್ಕೆ ಕೈಲಾದಷ್ಟು ಸಹಾಯ ನೀಡುತ್ತಾ ಎಲ್ಲರ ಹೃದಯಲ್ಲಿ ನೆಲಸಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಉಚಿತ ಕಾನೂನು ಸಲಹೆ ನೀಡುತ್ತಾ ಬಂದಿರುವುದು ಶ್ಲಾಘನೀಯ. ಜಿ ಟಿ ನಾಯ್ಕ, ಓರ್ವ ಸರಳ ಸಜ್ಜನ ಕೊಡುಗೈ ದಾನಿ.ಶಿಕ್ಷಣ, ಕಲಾ, ಸಾಂಸ್ಕೃತಿಕ ಪ್ರೇಮಿ. ಧಾರ್ಮಿಕ ಕ್ಷೇತ್ರಗಳಿಗೆ ಅವರು ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಜಿಲ್ಲೆಯಾದ್ಯಂತ ಉತ್ತಮ ಜನಾಭಿಪ್ರಾಯ ಹೊಂದಿದ್ದಾರೆ. ಹಾಗಾಗಿ ಕಾಂಗ್ರೇಸ್ ಪಕ್ಷ ಅವರಿಗೆ ಹೆಚ್ಚಿನ ಸ್ಥಾನಮಾನವನ್ನು ನೀಡಬೇಕು.
ಅವರು ಮೀನುಗಾರರು ಮತ್ತು ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ.. ಸಮಾಜದ ಎಲ್ಲಾ ವರ್ಗದವರಿಗೆ ಬೇಕಾದವರಾಗಿದ್ದಾರೆ. ಇಂತಹ ವ್ಯಕ್ತಿಗಳನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಪಕ್ಷದಲ್ಲಿ ಮಾಡಿದ ಸೇವೆಯನ್ನು ಗಮನಿಸಿ ಅವರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕೆಂದು ಅಂಕೋಲಾ ತಾಲೂಕು ಜಿ .ಟಿ. ನಾಯ್ಕ ಅಭಿಮಾನಿ ಬಳಗದವರು ಸಿ.ಎಂ ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ಕೆ.ಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರಿಗೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಅಂಕೋಲಾ ಅಭಿಮಾನಿ ಬಳಗದ ಪ್ರಮುಖರಾದ ಶಬ್ಬೀರ್ ಶೇಕ್ ಕಾಕರಮಠ, ಶೇಕ್ ಅಲಿ ಎಂ, ಅಬ್ದುಲ್ ಕರೀಂ ಎಂ ಶೇಕ್, ಶೇಕ್ ಅಹ್ಮದ್ ಬಾಬರ್ ಸಾಬ್, ಅನ್ವರ್ ಮುಲ್ಲಾ, ಪುರಸಭೆ ಸದಸ್ಯರಾದ ಶಬೀರ್ ಶೇಕ್, ಅಮೀರ್ ಖುರೇಷಿ, ಅನ್ವರ್ ಬೊಬ್ರುವಾಡ, ತಾಜ್ ಪೀರ್, ಅಗ್ರಗೋಣ ಜಮಾತ್ ಮಾಜಿ ಅಧ್ಯಕ್ಷ ರಂಜಾನ್ ಅಲಿ ಮುಜಾವರ್ ಹಾಗೂ ಅಭಿಮಾನಿ ಬಳಗದ ಹಲವು ಸದಸ್ಯರು ಉಪಸ್ಥಿತರಿದ್ದರು.