ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನಲ್ಲಿ ಗೋಪೂಜನ ,ಮಾತಾಪಿತೃ ಪೂಜನ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನ ಮಾತೃಮಂಡಳಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಕಾರ್ಯವನ್ನು ಮುಂಡಗೋಡದ ಅತ್ತಿವೇರಿಯ ಬಸವೇಶ್ವರಿ ಮಾತಾ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು “ಮಾನವ ಜನ್ಮದೊಡ್ಡದು ಎಂಭತ್ನಾಲ್ಕು ಲಕ್ಷ ಜೀವರಾಶಿ ದಾಟಿ ಬಂದ ಶರೀರ ಮನುಷ್ಯನದು. ಶಾಲೆಯೆಂದರೆ ಸ್ವರ್ಗಕ್ಕೆ ಸಮನಾದುದು. ಗುರುಕುಲ ಶಿಕ್ಷಣ ಜೀವನ ವಿದ್ಯೆ ಉಪಜೀವನ ವಿದ್ಯೆ ಎಂಬ ಎರಡು ಬಗೆಯನ್ನು ಕಲಿಸುತ್ತಿತ್ತು.ಉಪಜೀವನ ವಿದ್ಯೆಗಿಂತ ಜೀವನ ವಿದ್ಯೆಯೇ ದೊಡ್ಡದು. ವಿದ್ಯಾರ್ಥಿಗಳಿಗೆ ಉಪಜೀವನ ವಿದ್ಯೆ ಮಾತ್ರ ಇಂದು ಕಲಿಸಲಾಗುತ್ತಿದೆ.ಜೀವನ ವಿದ್ಯೆ ಕಲಿಸಲಾಗುತ್ತಿಲ್ಲ.ಮಕ್ಕಳಿಗೆ ಕಷ್ಟದ ಬದುಕನ್ನು ಕಲಿಸಲಾಗುತ್ತಿಲ್ಲ.ಮಕ್ಕಳು ಸಂಸ್ಕಾರ ಹೊಂದದೇ ಇದ್ದರೆ ಸಮಾಜ ಸುಧಾರಿಸಲಾರದು. ಮಕ್ಕಳು ಸಂಸ್ಕಾರವಂತರಾದರೆ ಮಾತ್ರ ಸ್ವಸ್ತ ಸಮಾಜ ನಿರ್ಮಾಣ ಸಾಧ್ಯ..”ಎಂದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಸ್ಥೆಯ ಕಾರ್ಯದರ್ಶಿ ಮುರಳೀಧರ ಪ್ರಭು, “ಸಂಸ್ಥೆಯ ಮೂಲ ಉದ್ದೇಶ ರಾಷ್ಟ್ರಪ್ರೇಮದ ಸಂಸ್ಕಾರಯುತವಾದ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಾಗಿದೆ.ಈ ಕಾರಣಕ್ಕಾಗಿ ಮಾತೃಮಂಡಳಿಯನ್ನು ರಚಿಸಲಾಗಿದೆ. ನಮ್ಮ ಪ್ರಯತ್ನಕ್ಕೆ ಮಾತೆಯರ ಸಹಕಾರ ಅಗತ್ಯ. ಮನೆಯಲ್ಲಿಯೂ ಸಂಸ್ಕಾರ ಇರಬೇಕು, ಸಂಸ್ಕಾರ ಕೊಡುವುದು ತಾಯಂದಿರ ಕರ್ತವ್ಯ ನಾವೆಲ್ಲ ನಮ್ಮ ತಾಯಿಯಿಂದಲೇ ಸಂಸ್ಕಾರ ಸಂಸ್ಕೃತಿಯನ್ನು ಕಲಿತಿದ್ದೇವೆ. ದೀಪಾವಳಿಮೇಳ,ಭಗವದ್ಗೀತಾ ಅಭಿಯಾನ ಮೊದಲಾದ ಕಾರ್ಯಕ್ರಮಗಳನ್ನು ಮಾತೃಮಂಡಳಿ ಯಶಸ್ವಿಯಾಗಿ ನೆರವೇರಿಸಿಕೊಂಡು ಬಂದಿದೆ..” ಎಂದರು.
ಈ ಸಂದರ್ಭದಲ್ಲಿ ಗೋಪೂಜೆಯ ಕಾರ್ಯಕ್ರಮ ನಡೆದು ನೂರಾರು ಪುಟಾಣಿಗಳು ಭಗವದ್ಗೀತೆ ಲಿಂಗಾಷ್ಠಕಗಳ ಪಠಣ ಮಾಡಿ ಜನಮನ ಗೆದ್ದರು.
ಮಾತಾ ಪಿತೃಪೂಜನ ಕಾರ್ಯಕ್ರವು ನಡೆಯಿತು.ಪ್ರೌಢಶಾಲಾ ಮಾತೃಮಂಡಳಿಯ ಅಧ್ಯಕ್ಷರಾಗಿ ಶ್ರೀಮತಿ ಮೇಘಾಡಿ ಬಾಳಗಿ, ಉಪಾಧ್ಯಕ್ಷೆಯಾಗಿ ಶ್ರೀಮತಿ ಜ್ಯೋತಿ ಎಸ್ ನಾಯ್ಕ ಕಾರ್ಯದರ್ಶಿಯಾಗಿ ಶ್ರೀಮತಿ ಗೌರಿ ಜಿ ಭಟ್ಟ ಸಹಕಾರ್ಯದರ್ಶಿಯಾಗಿ ಶ್ರೀಮತಿ ಸ್ವಾತಿ ವಿ ಶಾನಭಾಗ ಹಾಗೂ ಸರಸ್ವತಿ ವಿದ್ಯಾಕೇಂದ್ರ ಪ್ರಾಥಮಿಕ ಶಾಲೆಯ ಮಾತೃಮಂಡಳಿಯ ಅಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಮೋಹನ ಅಂಬಿಗ, ಉಪಾಧ್ಯಕ್ಷರಾಗಿಶ್ರೀಮತಿ ಪ್ರಜ್ಞಾ ಪಿ ಶಾನಭಾಗ ಕಾರ್ಯದರ್ಶಿ ಯಾಗಿ ಶ್ರೀಮತಿ ಜಯಾ ಆರ್ ನಾಯಕ ಸಹಕಾರ್ಯದರ್ಶಿಯಾಗಿ ಶ್ರೀಮತಿ ವನಿತಾ ಜಿ ನಾಯಕ. ಬಾಲಮಂದಿರದ ಅಧ್ಯಕ್ಷರಾಗಿ ಶ್ರೀಮತಿ ಆರಾಧ್ಯ ಆರ್ ಭಟ್ಟ ಉಪಾಧ್ಯಕ್ಷರಾಗಿ ಶ್ರೀಮತಿ ಪೂಜಾ ಎಸ್ ಪ್ರಭು ಕಾರ್ಯದರ್ಶಿಯಾಗಿ ತನುಜಾ ವಿ ಪಟಗಾರ ಸಹ ಕಾರ್ಯದರ್ಶಿಯಾಗಿ ಶ್ರೀಮತಿ ವಿನುತಾ ಎಚ್ ವಿಜವಾಬ್ದಾರಿಯನ್ನು ವಹಿಸಿಕೊಂಡರು.ಹಾಗೆಯೇ ವೇದಿಕೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿ, ಶೈಕ್ಷಣಿಕ ಸಲಹೆಗಾರರಾದ ಆರ್ ಎಚ್ ದೇಶಭಂಡಾರಿ ಸಂಸ್ಥೆಯ ಎಲ್ಲಾ ಅಂಗಶಾಲೆಗಳ ಮುಖ್ಯೋಪಾಧ್ಯರು ಹಾಗೂ ಪ್ರಾಚಾರ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿ ಆರ್ ನಾಯಕ ವಹಿಸಿದ್ದರು. ಕುಮಾರಿ ಶ್ರೇಯಾ ಹೆಬ್ಬಾರ ಸಂಗಡಿಗರು ಪ್ರಾರ್ಥಿಸಿದರು.ಮುಖ್ಯಾಧ್ಯಾಪಕಿ ಸಾವಿತ್ರಿ ಹೆಗಡೆ ಸ್ವಾಗತಿಸಿದರು.ಶಿಕ್ಷಕ ಕಾಗಾಲ ಚಿದಾನಂದ ಭಂಡಾರಿ ವಂದನಾರ್ಪಣೆ ಗೈದರು. ಅರ್ಚಕ ಶಶಿಧರ ಭಟ್ಟ ರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಶಿಕ್ಷಕ ಗೌರೀಶ ಭಂಡಾರಿ ಕಾರ್ಯಕ್ರವನ್ನು ನಿರ್ವಹಿಸಿದರು.