ನೀರಿಗಾಗಿ ಸಿದ್ದಾಪುರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳ ಪರದಾಟ

ಸಿದ್ದಾಪುರ : ಬೋರ್ವೆಲ್‌ನಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಕೆ ಯಾಗದೆ ಇರೋದ್ರಿಂದ, ಸಿದ್ದಾಪುರ ಪಟ್ಟಣದಲ್ಲಿರುವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೋರ್ವೆಲ್‌ನಲ್ಲಿ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಕೆ ಯಾಗದೆ ಇರೋದ್ರಿಂದ, ಸಿದ್ದಾಪುರ ಪಟ್ಟಣದಲ್ಲಿರುವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿಯೇ ಈ ಪರಿಸ್ಥಿತಿ ಎದುರಾದ್ರೆ, ಮುಂದಿನ ಗತಿ ಏನು ಎನ್ನುವುದು ಹಾಸ್ಟೆಲ್ ವಿದ್ಯಾರ್ಥಿಗಳ ಹಾಗೂ ಅಧಿಕಾರಿಗಳ ಚಿಂತೆಯಾಗಿದೆ. ಪಟ್ಟಣ ಪಂಚಾಯಿತಿಯವರು ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿದ್ರೂ ಸಹ, ಈ ಬಾರಿ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಬೇಸಿಗೆಯಲ್ಲಿ ಈ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ತಲೆದೊರಲಿದೆ.

ಸ್ಥಳಕ್ಕೆ ತಹಶೀಲ್ದಾರ್ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಪ್ರಮುಖರಾದ ಇಲಿಯಾಸ್ ಸಿ.ಎಸ್. ಗೌಡರ್, ಗಾಂಧೀಜಿ ನಾಯ್ಕ್ ಮೊದಲಾದವರು ನೀರಿನ ಪೂರೈಕೆಗೆ ಅಗತ್ಯ ಸಲಹೆ ಸೂಚನೆ ನೀಡಿದ್ರು. ವಸತಿ ನಿಲಯದಲ್ಲಿ 186 ವಿದ್ಯಾರ್ಥಿನಿಯರಿದ್ದಾರೆ ಎಲ್ಲರಿಗೂ ಮಿತವಾಗಿ ನೀರು ಬಳಸಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈಗಿರುವ ಬೋರ್ ವೆಲ್ ಕೆಟ್ಟಿದ್ದು ಇದನ್ನು ದುರಸ್ಥಿ ಮಾಡಿದ್ರೆ ಏನೂ ಪ್ರಯೋಜನವಾಗುವುದಿಲ್ಲ. ಹೊಸ ಬೋರ್ ವೆಲ್ ಅಳವಡಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ಪ್ರಮುಖರು ಸಲಹೆ ನೀಡಿದ್ದಾರೆ.