ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಗುಣವಂತೆಯ ಶಂಭುಲಿಂಗೇಶ್ವರನಿಗೆ ನೂತನ ಶಿಲಾಮಯ ಮಂದಿರ ನಿರ್ಮಾಣ ಕಾರ್ಯದ ಅಂಗವಾಗಿ, ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ… ರಾವಣನಿಂದ ಸ್ಥಾಪಿತಗೊಂಡ ಪಂಚ ಕ್ಷೇತ್ರದಲ್ಲಿ ಒಂದಾದ ಗುಣವಂತೇಶ್ವರನ ಸಾನಿಧ್ಯಕ್ಕೆ ನೂತನ ಶೀಲಾಮಂದಿರ ನಿರ್ಮಾಣದ ಮಹಾ ಕೈಂಕರ್ಯಕ್ಕೆ ಮುಂದಾಗಿದ್ದು, ಈಗಾಗಲೇ ಶಿಲಾಪೂಜೆ ನಡೆದಿದೆ. ಇದೆ ಬರುವ ಸಪ್ಟಂಬರ 25,26,27 ರಂದು ನಿರ್ಮಾಣದ ಮೊದಲ ಹಂತದ ಪೂಜಾ ಕೈಂಕರ್ಯ ಆರಂಭವಾಗಲಿದ್ದು ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಸೀಮಾದೇವ ಮಹಾದೇವನ ನೂತನ ಶೀಲಾಮಯ ಮಂದಿರ ನಿರ್ಮಾಣಕ್ಕೆ ಸೀಮಾ ಭಕ್ತರು ತಮ್ಮ ಭಕ್ತಿಯಾನುಸಾರ ಸೇವೆ ಸಲ್ಲಿಸಬಹುದಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ… ಮುರುಡೇಶ್ವರ ನಿರ್ಮಾತ್ರರು ಆಗಿರುವ ದಿವಂಗತ ಆರ್ ಏನ್ ಶೆಟ್ಟಿಯವರ ಮಗ ಸುನೀಲ್ ಶೆಟ್ಟಿ ಅವರು ಗರ್ಭಗುಡಿಯಿಂದ ನಂದಿಯವರೆಗಿನ ನಿರ್ಮಾಣ ಕಾರ್ಯಕ್ಕೆ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುತ್ತಿದ್ದಾರೆ. ಸೀಮೆಯ ದೇವ ಮಹಾದೇವನಿಗೆ ಮನುಷ್ಯ ಪ್ರಯತ್ನದ ಶಾಶ್ವತ ಮಂದಿರ ನಿರ್ಮಾಣ ಕಾರ್ಯದಲ್ಲಿ ಗೇರುಸೊಪ್ಪ ಸೀಮೆಯ ಪರಶಿವನ ಭಕ್ತ ಸಮುದಾಯಕ್ಕೆ ತಮ್ಮ ಸೇವೆ ಸಮರ್ಪಣೆ ಮಾಡಲು ಅವಕಾಶ ಒದಗಿ ಬಂದಿದೆ…
ಪಂಚಕ್ಷೇತ್ರದಲ್ಲೇ ಈ ಕ್ಷಣಕ್ಕೂ ಅತ್ಯಂತ ಜಾಗ್ರತ ಸಾನಿಧ್ಯವಾಗಿ ನೆಲೆ ನಿಂತ ಗುಣವಂತೇಶ್ವರನ ಆಲಯದ ತುಂಬಾ ಶಕ್ತಿ ಚೈತನ್ಯ ರಿಂಗಣಿಸುತ್ತಲೆ ಇದೆ. ಕ್ಷೇತ್ರದ ಐತಿಹಾಸಿಕ ಮಹತ್ವಕ್ಕೆ ಇಲ್ಲಿರುವ 9 ಶಾಸನಗಳು ಮೈಲಿಗಲ್ಲಾಗಿ ನಿಂತಿದೆ. ವಿಜಯ ನಗರದ ಅರಸರಿಂದಾದಿಯಾಗಿ ಅನೇಕ ಆಳರಸರು, ಮಾಂಡಲೀಕರು, ಧಾನ ದತ್ತಿಗಳನ್ನು ನೀಡಿರುವ ಸಂಗತಿ ಅವಿಚ್ಚಿನ್ನವಾಗಿ ದೊರೆಯುತ್ತದೆ…
ಇಲ್ಲಿರುವ ಪುಷ್ಕರ ತೀರ್ಥದ ಜಿರ್ಣೋದ್ದಾರವನ್ನು ಕೇರಳದ ರಾಜ ರವಿವರ್ಮ ಮಾಡಿರುವುದು ತಿಳಿದು ಬಂದಿದೆ. ಇವರೆಲ್ಲ ಗುಣವಂತೇಶ್ವರನ ಪದತಲದಲ್ಲಿ ಸೇವೆ ಗೈದಿರುವದು ಶಿವಸಾನಿಧ್ಯದ ಮಹಿಮೆಗೆ ಸಾಕ್ಷಿಯಾಗಿ ಕಂಡು ಬರುತ್ತದ ಶಂಕರ್ ಗೌಡ ಗುಣವಂತೆ, 25 ರಿಂದ 27 ರ ತನಕ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ಸಾರ್ವಜನಿಕ ಪ್ರಾರ್ಥನೆ, ಸೀಮೆಯಲ್ಲಿ ಇರುವ ದೇವರಿಗೆ ಕಾಯಿ ಇಡುವುದು, ಪ್ರಾಯಶ್ಚಿತ್ತ ಹೋಮಗಳು, ಸ್ಥಾನಶುದ್ದಿ, ಬಿಂಬ ಶುದ್ಧಿ ಇತ್ಯಾದಿ ಹೋಮಗಳು, ಅದಿವಾಸ ಹೋಮ, ಕ್ಷಣಾರಾಜ ಬಿಂಬ ಶುದ್ಧಿ, 3 ದಿನದ ಪರ್ಯಂತರವಾಗಿ 25 ಸಾವಿರ ಪಂಚಾಕ್ಷರಿ ಹೋಮ ನಡೆಯಲಿದೆ. ಹಾಗೇ ಮೊದಲಾದ ಪೂಜಾ ವಿಧಿವಿದಾನದ ನಂತರ ಅಂತಿಮವಾಗಿ ಹಳೆಯ ಗರ್ಭಗುಡಿಯ ಸಂಕೋಚನ ನಡೆಯಲಿದ್ದು, ಸೀಮೆಯ ಸರ್ವಭಕ್ತರು ಈ ಎಲ್ಲ ಕಾರ್ಯದಲ್ಲಿ ಭಾಗಿಯಾಗಿ ಶಿವಕಾರ್ಯದ ಪುಣ್ಯ ಫಲ ಸಂಪಾದಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ…