ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪುರಾಣ ಪ್ರಸಿದ್ಧ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ

ಹೊನ್ನಾವರ: ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೊನ್ನಾವರ ತಾಲೂಕಿನ ಗುಣವಂತೆ ಸಮೀಪ ದ ನೆಲವಂಕಿಯ ಸುಪ್ರಸಿದ್ಧ ಧಾಮಿ೯ಕ ಸ್ಥಳವಾದ ಶ್ರೀ ದುಗಾ೯೦ಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ನಿಸರ್ಗದ ಹಸಿರ ಹೊದೆಕೆಯ ಮಧ್ಯೆ ತಾಯಿ ದುಗಾ೯ಮಾತೆಯ ದಶ೯ನವನ್ನು ಪಡೆಯಲು ನಾನಾ ಊರುಗಳಿಂದ ಭಕ್ತರು ಬರುವುದು ವಾಡಿಕೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಾರಿಯರು ಉಡಿ ಸೇವೆ ನೀಡುವ ಮೂಲಕ ಸೇವೆ ಸಲ್ಲಿಸಿದರು. ಇಲ್ಲಿ ನವರಾತ್ರಿಯ ಸಂದಭ೯ಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ನೆರವೇರುತ್ತದೆ. ಪುರಾಣ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಈ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದೆ. ಕಣ್ಣಳತೆ ದೂರದವರೆಗೂ ಬರಿ ಕಲ್ಲು ಬಂಡೆಗಳ ಬೆಟ್ಟ ಕಾಣಸಿಗುವ ಪ್ರಶಾಂತವಾದ ಈ ಪ್ರದೇಶದಲ್ಲಿ ವಷ೯ದ ಎಲ್ಲಾ ದಿನವೂ ದೇವಸ್ಥಾನದ ಸುತ್ತ ಮುತ್ತ ಶುದ್ಧ ನೀರು ಲಭ್ಯವಿರುವುದು ಆಶ್ಚರ್ಯದ ಜೊತೆ ದೇವರ ಮಹಿಮೆಯೇ ಇರಬೇಕು ಅನ್ನೋ ನಂಬಿಕೆ ಮೂಡುತ್ತದೆ. ಹೊನ್ನಾವರದಿಂದ ಗುಣವಂತೆ ಮೂಲಕ ಶ್ರೀ ಕ್ಷೇತ್ರ ಇಡಗುಂಜಿಗೆ ಸಾಗುವ ದಾರಿಯ ಮಧ್ಯೆ ಎಡ ಭಾಗಕ್ಕೆ ಈ ದೇವಾಲಯಕ್ಕೆ ಸಂಪಕಿ೯ಸುವ ಸುಸಜ್ಜಿತ ರಸ್ತೆ ಇದೆ.ದಿನದ ಜಂಜಾಟದ ನಡುವೆಯೂ, ನಿರಾಳರಾಗಲು ಕುಟುಂಬ ಸಮೇತರಾಗಿ ಭೇಟಿ ನೀಡಲು ನಿಸರ್ಗ ರಮಣೀಯ ಯೋಗ್ಯವಾದ ಸ್ಥಳವಾಗಿದೆ.