ಹೊನ್ನಾವರ : ಇತ್ತೀಚಿಗೆ ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರಕಾರವು ರೈತ ವಿರೋಧಿ ನಿಯಮವನ್ನು ಅನುಸುರಿತ್ತಾ ಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹಿಂದಿನ ಬಾಜಪ ಸರಕಾರವು ಜಾರಿಗೆ ತಂದಿರುವ ರೈತ ಪರ ಅನೇಕ ಯೋಜನೆಗಳನ್ನು ಸ್ಥಗಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದೆ. ಅದರಲ್ಲಿ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ ಯೋಜನೆಗೆ ಸಿಗುತ್ತಿದ್ದ 4000 ಸಾವಿರ ರೂಪಾಯಿ ಭೂ ಸಿರಿ ಯೋಜನೆ, ಶ್ರಮಶಕ್ತಿ ಯೋಜನೆ ಮತ್ತು ರೈತ ಸಂಪದ ಯೋಜನೆಗಳನ್ನು ಕೈಬಿಟ್ಟಿದೆ.ಅಧಿಕಾರಕ್ಕೆ ಬರುವಾಗ ರೈತರ ಹೆಸರನ್ನು ಬಳಸಿ ಅಧಿಕಾರ ಸಿಕ್ಕ ಮೇಲೆ ಅವರನ್ನು ತುಳಿಯುವಂತ ಕಾರ್ಯವು ಈಗಿನ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡುತ್ತಿವೆ. ಈಗಾಗಲೇ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ರಾಜ್ಯದಲ್ಲಿ ಬರಗಾಲದಂತ ಪರಿಸ್ಥಿತಿ ಇದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ರೈತ ವಿರೋಧಿ ಮತ್ತು ಜನ ವಿರೋಧಿ ನಿತಿಗಳನ್ನು ಹೊನ್ನಾವರ ‘ಮಂಡಲ ಮತ್ತು ರೈತ ಮೋರ್ಚ ಖಂಡಿಸುತ್ತದೆ. ರೈತರ, ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತೆ ಸರಕಾರಕ್ಕೆ ಆದೇಶ ನೀಡಬೇಕಾಗಿ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
ತಹಶೀಲ್ದಾರ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹೊನ್ನಾವರ ಮಂಡಲಾಧ್ಯಕ್ಷ ರಾಜೇಶ್ ಭಂಡಾರಿ ಮಾತನಾಡಿ,ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೆ ತಂದಿಲ್ಲ.ಇವರ ಜನ ವಿರೋಧಿ ನೀತಿ ರೈತ ವಿರೋಧ ನೀತಿಯಿಂದ ಕಳೆದ ಬಾರಿ ಬಾಜಪ ಸರ್ಕಾರ ತಂದ ಯೋಜನೆಯನ್ನು ತಡೆಹಿಡಿದಿದ್ದಾರೆ.ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಅವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿಲ್ಲ.ಇದೆಲ್ಲವನ್ನೂ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಬೈಟ್: ರಾಜೇಶ್ ಭಂಡಾರಿ
ಈ ಸಂದರ್ಭದಲ್ಲಿ ರೈತಮೊರ್ಚಾ ಅಧ್ಯಕ್ಷ ಎನ್.ಎಸ್.ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ,ಶಿವರಾಜ ಮೇಸ್ತ,ವಿಜು ಕಾಮತ್, ಸುಭಾಷ ಹರಿಜನ, ವಿನೋದ ಮೇಸ್ತ, ನಿಶಾ ಶೇಟ್, ಸುಜಾತ ಮೇಸ್ತ, ನಾಗರತ್ನ ಕೊನೇರಿ, ಭಾರತಿ ಭಂಡಾರಿ, ದತ್ತಾ ಅವಧಾನಿ, ಗಣೇಶ ಪೈ ಮುಂತಾದವರು ಉಪಸ್ಥಿತರಿದ್ದರು.