ಜೋಯಿಡಾ ತಾಲ್ಲೂಕಿನ ಮೌಳಂಗಿಯ ಇಕೋ‌ ಪಾರ್ಕ್ ಹತ್ತಿರ ಅಪರಿಚಿತ ಮಹಿಳೆಯ ಶವ ಪತ್ತೆ

ಜೋಯಿಡಾ : ತಾಲೂಕಿನ ಮೌಳಂಗಿ ಇಕೋ ಪಾರ್ಕ್ ಹತ್ತಿರ ಅಪರಿಚಿತ ಮಹಿಳೆಯೋರ್ವಳ ಮೃತದೇಹ ಪತ್ತೆಯಾದ ಘಟನೆ ಬುಧವಾರ ನಡೆದಿದೆ.

ಮೃತ ಮಹಿಳೆ ಅಪರಿಚಿತಳಾಗಿದ್ದು, ಮೃತ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಗೆ ಇಲ್ಲವೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08284 -230363 ಅಥವಾ ಮೊಬೈಲ್ ಸಂಖ್ಯೆ 9480805259 ಸಂಪರ್ಕಿಸಬೇಕೆಂದು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ಕೃಷ್ಣ ಗೌಡ ಅವರು ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.