ಜೋಯಿಡಾ : ಜೋಯಿಡಾ ತಾಲ್ಲೂಕಿನ ಸೂಪಾ, ಕುಂಬಾರವಾಡ ಮತ್ತು ಕ್ಯಾಸಲರ್ ರಾಕ್ ಹೋಬಳಿಗಳಲ್ಲಿ ಪಿಂಚಣಿ ಅದಾಲತ್ ನಡೆಸಲು ತಹಶೀಲ್ದಾರ್ ಜುಬೀನ್ ಮಹಾಪಾತ್ರ ಅವರು ನಿರ್ಧರಿಸಿದ್ದಾರೆ.
ಜೂನ್ :07 ರಂದು ಕ್ಯಾಲ್ ರಾಕ್, ಜೂನ್: 12 ರಂದು ಸೂಪಾ ಮತ್ತು ಜೂನ್ :13 ರಂದು ಕುಂಬಾರವಾಡ ಹೋಬಳಿಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಪಿಂಚಣಿ ಅದಾಲತ್ ನಡೆಸಲಾಗುತ್ತಿದ್ದು, ಸಾರ್ವಜನಿಕರು ಈ ಅದಾಲತಿನಲ್ಲಿ ಭಾಗವಹಿಸಿ ಪಿಂಚಣಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಜೊತೆಗೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಜೋಯಿಡಾ ತಹಶೀಲ್ದಾರ್ ಕಾರ್ಯಾಲಯ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ.