ಆಯ ತಪ್ಪಿ ಹಳ್ಳಕ್ಕೆ ಬಿದ್ದ ಕಾರು: ನಾಲ್ಕು ಜನ ಅದೃಷ್ಟವಶಾತ್ ಪಾರು

ಜೋಯಿಡಾ: ಕಾರೊಂದು ಆಯ ತಪ್ಪಿ ಹಳ್ಳಕ್ಕೆ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನ ಅದೃಷ್ಟವಶಾತ್ ಪಾರಾದ ಘಟನೆ ಜೋಯಿಡಾ ತಾಲೂಕಿನ ಅನಮೋಡ್ ಬಳಿ ನಡೆದಿದೆ. ಗೋವಾದಿಂದ ಅನಮೋಡ್ ಮಾರ್ಗವಾಗಿ ರಾಮನಗರಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.