ಕರಡಿ ದಾಳಿಯಿಂದ ಮೃತಪಟ್ಟಿದ್ದ ಓಂಕಾರ್ ಜೈನ್ ಮನೆಗೆ ಸ್ಪೀಕರ್ ಕಾಗೇರಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ಶಿರಸಿ: ಆರು ದಿನಗಳ ಹಿಂದೆ ಕರಡಿ ದಾಳಿಗೆ ತುತ್ತಾಗಿ‌ ಸಾವನ್ನಪ್ಪಿದ್ದ ದೇವನಳ್ಳಿ ಸಮೀಪದ ಸುಂಡಳ್ಳಿಯ ಓಂಕಾರ ಪದ್ಮಯ್ಯ ಜೈನ್ ರವರ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ‌ ನೀಡಿ ಸಾಂತ್ವನ‌ ಹೇಳಿದರು. ಅರಣ್ಯ ಇಲಾಖೆಯಿಂದ 7.50 ಲಕ್ಷ ರೂ. ಧನ ಸಹಾಯದ ನೆರವಿನ ಆದೇಶ ಪ್ರತಿ ಹಸ್ತಾಂತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಜ್ಜಯ್ಯ ಜಿ ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಘು ಡಿ, ತಹಶೀಲ್ದಾರ್ ಶ್ರೀಧರ ಮುದಲನಿ, ಪ್ರಮುಖರಾದ ಆರ್ ಡಿ ಹೆಗಡೆ ಜಾನ್ಮನೆ, ಎನ್ ವಿ ಹೆಗಡೆ ಬಕ್ಕಳ, ಸುನೀಲ್ ಭಟ್ಟ, ವಲಯ ಅರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ, ಸರಗುಪ್ಪ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು ಗ್ರಾಪಂ ಸದಸ್ಯರು ಹಾಗೂ ಊರಿನ ಪ್ರಮುಖರು ಇದ್ದರು.