ಶಿರಸಿ: ಅಬಕಾರಿ ಉಪವಿಭಾಗ ಹಾಗೂ ಪೋಲಿಸ್ ಇಲಾಖೆಯಿಂದ 2019-20 ನೇ ಸಾಲಿನಲ್ಕಿ 15 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸುಮಾರು1.25 ಲಕ್ಷ ರೂ ಬೆಲೆಯ ಅಕ್ರಮ ಮದ್ಯವನ್ನು ಗುರುವಾರ ನಾಶ ಪಡಿಸಲಾಯಿತು.
1.25 ಲಕ್ಷ ರೂ ಬೆಲೆಯ 337.77 ಲೀ ಮದ್ಯ. 9 ಸಾವಿರ ರೂ ಬೆಲೆಯ 71 ಲೀ ಬಿಯರ್ ಹಾಗು 700 ರೂ ಬೆಲೆಯ 7 ಲೀ. ಕಳ್ಳಬಟ್ಟಿ ಸರಾಯಿಯನ್ನು ಅಧಿಕಾರಿಗಳ ಸಮಕ್ಷಮದಲ್ಲಿ ಶಿರಸಿ ಅಬಕಾರಿ ಇಲಾಖೆಯ ಕಚೇರಿಯಲ್ಲಿ ನಾಶಪಡಿಸಲಾಯಿತು.
ಈ ವೇಳೆ ಶಿರಸಿ ಉಪ ವಿಭಾಗದ ಉಪ ಅಧೀಕ್ಷಕ ಎಚ್ ಶಿವಪ್ಪ,ಅಬಕಾರಿ ನಿರೀಕ್ಷಕ ಮಹೆಂದ್ರ ಎಸ್ ನಾಯ್ಕ,ಜ್ಯೋತಿಶ್ರೀ ನಾಯ್ಕ ಹಾಗು ಉಪ ನಿರೀಕ್ಷಕ ಉದಯ ಸಿರ್ಸಿಕರ್ ಇದ್ದರು.