ಇಂದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ: ಜಯಗಳಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರೇಣುಕಾ ಬಡಗೇರ ಉಪಾಧ್ಯಕ್ಷರಾಗಿ ಕಲ್ಲೇಶ ಸುಣಗಾರ ‍ಆಯ್ಕೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ಗಾ.ಪಂ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ ಮತ್ತು ಉಪಾಧ್ಯಕ್ಷ ಸಿಕಂದರ್ ಬಂಕಾಪುರ ತಮ್ಮ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜೀಯಾ ಬೇಗಂ ಗೌಳಿ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾ ಬಡಗೇರ ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಧರ್ಮರಾಜ ನಡಗೇರ ಮತ್ತು ಬಿಜೆಪಿ ಬೆಂಬಲಿತ ಕಲ್ಲೇಶ ಸುಣಗಾರ ನಾಮಪತ್ರ ಸಲ್ಲಿಸಿದ್ದರು. ಒಟ್ಟು 16 ಸದಸ್ಯರನ್ನು ಒಳಗೊಂಡ ಪಂಚಾಯಿತಿ ಇದಾಗಿತ್ತು.

ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಅಧ್ಯಕ್ಷ ಉಪಾಧ್ಯಕ್ಷ ಬೆಂಬಲಿತರು 13 ರಂತೆ ಮತವನ್ನು ಪಡೆದು ಗಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾದರು. ಪ್ರತಿಸ್ಪರ್ಧಿ ತಲಾ 3 ಮತಗಳನ್ನು ಪಡೆದರು. ಬಿಜೆಪಿ ಬೆಂಬಲಿತ ಅಧ್ಯಕ್ಷ- ಉಪಾಧ್ಯಕ್ಷ ರಾದ ಕಾರಣ ಬಿಜೆಪಿ ಮುಖಂಡರು, ಕಾರ್ಯಕರ್ತರು ಗ್ರಾಮದಲ್ಲಿ ವಿಜಯೋತ್ಸವ ಆಚರಿಸಿದರು. ಚುನಾವಣಾಧಿಕಾರಿಯಾಗಿ ರಫೀಕ ಮೀರಾಸಾಬ್ಅವರು ಕಾಯ೯ನಿವಹಿಸಿದರು.
ಬಿಜೆಪಿ ಮುಖಂಡರಾದ ರವಿಗೌಡ ಪಾಟೀಲ, ಕೆಂಜೋಡಿ ಗಲಬಿ, ಬಿ.ಕೆ ಪಾಟೀಲ, ಮಮ್ಮದಲಿ ದೇಶಳ್ಳಿ, ರವಿ ದುಗ್ಗಳ್ಳಿ ಅಶೋಕ ತಡಸದ ಬಸ್ಸು ಗಲಬಿ ಸೇರಿದಂತೆ ಮುಂತಾದವರಿದ್ದರು.