ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಉತ್ತರ ಕನ್ನಡದ ಪುರುಷೋತ್ತಮ‌ ಗೌಡ ಆಯ್ಕೆ

ಕಾರವಾರ: ಭಾರತ ಸರ್ಕಾರದ ಆರೋಗ್ಯ ಮಂತ್ರಾಲಯದ ನ್ಯಾಕೊ ವತಿಯಿಂದ ಆಗಸ್ಟ್ 17 ಹಾಗೂ 18 ರಂದು ಕೇರಳದ ಎರ್ನಾಕುಲಂ ನಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಕಾರವಾರದ ಕಲಾವಿದ ಪುರುಷೋತ್ತಮ ಗೌಡ ಆಯ್ಕೆಯಾಗಿದ್ದಾರೆ.

‘ಹೆಚ್.ಐ.ವಿ. ಮತ್ತು ಏಡ್ಸ್ ನಿಯಂತ್ರಣ’ ಕುರಿತಾದ 2 ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮತ್ತು ಕಾರ್ಯಾಗಾರದಲ್ಲಿ ಕರ್ನಾಟಕದ ಕೆಸೆಪ್ಸ್ ವತಿಯಿಂದ 5 ಜನ ಪ್ರತಿನಿಧಿಸುತ್ತಿದ್ದು ಇವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪುರುಷೋತ್ತಮ‌ ಗೌಡ ಕೂಡ ಒಬ್ಬರಾಗಿದ್ದಾರೆ.

ಪ್ರತಿ ರಾಜ್ಯದಿಂದ 5 ಕಲಾವಿದರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪುರುಷೋತ್ತಮ ಗೌಡ ಅವರು ಈಗಾಗಲೇ ಹಾಲಕ್ಕಿ ಸುಗ್ಗಿ ಕುಣಿತ, ಜಡೆ ಕೋಲಾಟ ಮತ್ತು ಬೀದಿ ನಾಟಕ ಕ್ಷೇತ್ರದಲ್ಲಿ ಕಲಾವಿದರಾಗಿ, ಸಂಘಟಕರಾಗಿ, ನಾಯಕರಾಗಿ ಹೆಸರು ಮಾಡಿದ್ದಾರೆ. ಅವರು ಕರ್ನಾಟಕ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ಪ್ರಸ್ತುತ ಗೌರವಾಧ್ಯಕ್ಷರಾಗಿ ಕಲಾವಿದರ ಒಳಿತಾಗಿ ಶ್ರಮಿಸುತ್ತಿದ್ದಾರೆ.