ಜೋಯಿಡಾ : ಜೋಯಿಡಾ ತಾಲ್ಲೂಕು ಕೇಂದ್ರದ ಜೋಯಿಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಹಿನ್ನಲೆಯಲ್ಲಿ ತಹಶೀಲ್ದಾರ್ ಜುಬೀನ್ ಮೊಹಪತ್ರ ಅವರು ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳೊಂದಿಗೆ ಕುಡಿಯುವ ನೀರು ಪೊರೈಕೆಯ ಸ್ಥಳವನ್ನು ಪರಿಶೀಲಿಸಿ, ಸ್ಥಳೀಯವಾಗಿರುವ ಸಮಸ್ಯೆಯನ್ನು ಕೂಡಲೆ ಸಮಸ್ಯೆಯನ್ನು ಬಗೆಹರಿಸಬೇಕು. ಈ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಂಡು ತಾಲ್ಲೂಕು ಪಂಚಾಯ್ತು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತು ಪಿಡಿಓ ಅವರು ನಾಳೆಯೊಳಗಡೆ ಸಮಸ್ಯೆ ಬಗೆಹರಿಸಿದ ಬಗ್ಗೆ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದರು.
ಕುಡಿಯುವ ನೀರು ಪೊರೈಕೆಯಲ್ಲಿ ಸಮಸ್ಯೆಗಳಾದಾಗ ತಕ್ಷಣ ಸ್ಪಂದಿಸುವುದು ನಮ್ಮೆಲ್ಲರ ಬಹುಮುಖ್ಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿ, ಕಂದಾಯ ನಿರೀಕ್ಷಕರಾದ ಗಣಪತಿ ಮೇತ್ರಿ ಮೊದಲಾದವರು ಉಪಸ್ಥಿತರಿದ್ದರು.